Sunday, November 9, 2025

ʼಡೆತ್ ಸಿರಪ್‌ʼ : ಮಧ್ಯಪ್ರದೇಶದಲ್ಲಿ 3 ವರ್ಷದ ಬಾಲಕಿ ಸಾವು, ಮೃತರ ಸಂಖ್ಯೆ 24ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನಿಂದಾಗಿ ಉಂಟಾಗಿರುವ ತೀವ್ರ ಮೂತ್ರಪಿಂಡ ವೈಫಲ್ಯದ ಕಾರಣ ಮಧ್ಯಪ್ರದೇಶದಲ್ಲಿ ಮತ್ತೊಂದು ಮಗು ಸಾವನ್ನಪ್ಪಿದೆ. ಈ ದುರಂತದಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.

ಇತ್ತೀಚಿನ ಸಾವು ಮಹಾರಾಷ್ಟ್ರದ ನಾಗ್ಪುರದ ಆಸ್ಪತ್ರೆಯಿಂದ ವರದಿಯಾಗಿದ್ದು, ಸೆಪ್ಟೆಂಬರ್ 14 ರಿಂದ ಚಿಕಿತ್ಸೆ ಪಡೆಯುತ್ತಿದ್ದ ಚಿಂದ್ವಾರ ಜಿಲ್ಲೆಯ ಚೌರೈ ಪ್ರದೇಶದ ಮೂಲದ ಮೂರುವರೆ ವರ್ಷದ ಅಂಬಿಕಾ ವಿಶ್ವಕರ್ಮ ಬುಧವಾರ ತೀವ್ರ ಮೂತ್ರಪಿಂಡ ವೈಫಲ್ಯದಿಂದ ನಿಧನರಾದರು.

ಈ ದುರಂತ ಬೆಳವಣಿಗೆಯನ್ನು ಚಿಂದ್ವಾರದ ಹೆಚ್ಚುವರಿ ಜಿಲ್ಲಾಧಿಕಾರಿ ಧೀರೇಂದ್ರ ಸಿಂಗ್ ದೃಢಪಡಿಸಿದ್ದು, ಈ ಇತ್ತೀಚಿನ ಸಾವಿನೊಂದಿಗೆ, ಸೆಪ್ಟೆಂಬರ್ 3 ರಿಂದ ಚಿಂದ್ವಾರ ಜಿಲ್ಲೆಯ ವಿವಿಧ ಭಾಗಗಳಿಂದ 21 ಮಕ್ಕಳು ಕೆಮ್ಮಿನ ಸಿರಪ್ ವಿಷದಿಂದ ಉಂಟಾಗುವ ತೀವ್ರ ಮೂತ್ರಪಿಂಡ ವೈಫಲ್ಯದಿಂದ ಚಿಂದ್ವಾರ ಮತ್ತು ನಾಗ್ಪುರದ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ.

ಪಂಧುರ್ನಾ ಜಿಲ್ಲೆಯ ಒಬ್ಬರು ಮತ್ತು ಬೇತುಲ್ ಜಿಲ್ಲೆಯ ಇಬ್ಬರು ಮಕ್ಕಳು ಸೇರಿದಂತೆ ಇನ್ನೂ ಮೂರು ಮಕ್ಕಳು ಇದೇ ರೀತಿಯ ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪಿದ್ದು, ದಕ್ಷಿಣ ಮಧ್ಯಪ್ರದೇಶ ಜಿಲ್ಲೆಗಳಿಂದ ಈ ಸಾವನ್ನಪ್ಪಿದ ಒಟ್ಟು ಮಕ್ಕಳ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ.

error: Content is protected !!