Tuesday, October 28, 2025

ನೀರಿನ ಸಂಪ್ ನಲ್ಲಿ ನವವಿವಾಹಿತೆ ಶವ ಪತ್ತೆ: ಪತಿ ಮನೆಯವರ ವಿರುದ್ಧ ಆರೋಪ

ಹೊಸದಿಗಂತ ವರದಿ ಗದಗ:

ನೀರಿನ ನೆಲ ಟ್ಯಾಂಕ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ನವವಿವಾಹಿತೆಯ ಶವ ಪತ್ತೆಯಾದ ಘಟನೆ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಜ್ಜೂರು ಶಿವಾಜಿ ನಗರದಲ್ಲಿ ನಡೆದಿದೆ.

24 ವರ್ಷದ ಪ್ರಿಯಾಂಕಾ ಲಮಾಣಿ ಮೃತಪಟ್ಟಿರುವ ನವವಿವಾಹಿತೆ. ನವ ವಿವಾಹಿತೆಯನ್ನು ಪತಿ ಮಹಾಂತೇಶ್ ಹನುಂಮತಪ್ಪ ಲಮಾಣಿ ಕುಟುಂಬಸ್ಥರು ಕೊಲೆ ಮಾಡಿ ನೀರಿನ ಟ್ಯಾಂಕ್ ನಲ್ಲಿ ಬಿಸಾಕಿರುವುದಾಗಿ ಮೃತ ಯುವತಿ ಕುಟುಂಬಸ್ಥರಿಂದ ಆರೋಪಿಸಿದ್ದಾರೆ.

ಮಹಾಂತೇಶ್ ಎಂಬಾತನ ಜೊತೆ ಪ್ರಿಯಾಂಕಾ ಕಳೆದ 5 ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಅದೇ ಏರಿಯಾದ ನಾರಾಯಣ ಲಕ್ಷ್ಮಣ ತುಳಸಿಮನಿ ಎಂಬುವರ ಮನೆ ನೀರಿನ ಸಂಪ್ ನಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಬೆಳಿಗ್ಗೆ ಮನೆ ಮುಂದಿನ ನೀರಿನ ಸಂಪ್ ಓಪನ್ ಆಗಿರುವುದನ್ನು ನೋಡೊದಾಗಿ ಅಲ್ಲಿ ಯುವತಿ ಶವ ಕಂಡು ಬೆಚ್ಚಿಬಿದ್ದಿದ್ದಾರೆ. ಮೃತ ಮಹಿಳೆಗೆ ನಿತ್ಯ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಹಬ್ಬಕ್ಕೆ ಊರಿಗೆ ಕಳುಹಿಸಲಿಲ್ಲ. ಹೆಚ್ಚಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಅಂತ ನಿತ್ಯ ಕಿರುಕುಳ ಕೊಡುತ್ತಿರುವುದನ್ನು ಕುಟುಂಬಸ್ಥರಿಗೆ ಹೇಳುತ್ತಿದ್ದಳು ಎಂಬ ಯುವತಿ ಕುಟುಂಬಸ್ಥರ ಆರೋಪವಾಗಿದೆ. ಆದ್ರೆ ಪತಿ ಕುಟುಂಬಸ್ಥರು ಹೇಳುವ ಪ್ರಕಾರ, ನೀರು ತರಲು ಹೋಗಿ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಗದಗ ಎಸ್ಪಿ ರೊಇಹನ್ ಜಗದೀಶ್, ಶಿರಹಟ್ಟಿ ಸಿಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿಗಳು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪತಿ ಮಹಾಂತೇಶ್, ಮಾವ ಹನುಮಂತಪ್ಪ, ಅತ್ತೆ ಹಾಗೂ ಸಹೋದರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತುಗದಗ ಜಿಲ್ಲೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌ ಯುವತಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

error: Content is protected !!