Monday, November 10, 2025

Vastu | ವಾಸ್ತು ಪ್ರಕಾರ ಶೌಚಾಲಯ, ಸ್ನಾನಗೃಹ ಯಾವ ದಿಕ್ಕಿನಲ್ಲಿದ್ರೆ ಒಳ್ಳೆದು?

ಪ್ರತಿಯೊಬ್ಬರೂ ತಮ್ಮ ಮನೆ ಸುಂದರವಾಗಿರಬೇಕು ಎಂದು ಬಯಸುತ್ತಾರೆ. ಆದರೆ ಲಿವಿಂಗ್ ರೂಂ, ಬೆಡ್‌ರೂಂ ಅಥವಾ ಕಿಚನ್ ವಿನ್ಯಾಸಕ್ಕೆ ನೀಡುವಷ್ಟು ಗಮನ ಸ್ನಾನಗೃಹ ಮತ್ತು ಶೌಚಾಲಯಕ್ಕೆ ನೀಡೋದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಈ ಎರಡು ಸ್ಥಳಗಳು ಮನೆಯ ಶಕ್ತಿಚಕ್ರದ ಪ್ರಮುಖ ಅಂಶಗಳಾಗಿದ್ದು, ತಪ್ಪು ದಿಕ್ಕಿನಲ್ಲಿ ನಿರ್ಮಿಸಿದರೆ ನಕಾರಾತ್ಮಕ ಶಕ್ತಿಯ ಮೂಲಗಳಾಗಬಹುದು. ಆದ್ದರಿಂದ ಮನೆಯಲ್ಲಿ ಶೌಚಾಲಯ ಮತ್ತು ಸ್ನಾನಗೃಹ ನಿರ್ಮಾಣ ಮಾಡುವಾಗ ವಾಸ್ತು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.

  • ಸ್ನಾನಗೃಹ ಮತ್ತು ಶೌಚಾಲಯದ ಸರಿಯಾದ ದಿಕ್ಕು: ವಾಸ್ತು ಪ್ರಕಾರ ಶೌಚಾಲಯ ಮತ್ತು ಸ್ನಾನಗೃಹವನ್ನು ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿ ನಿರ್ಮಿಸುವುದು ಸೂಕ್ತ. ಮನೆಯ ಮಧ್ಯಭಾಗದಲ್ಲಿ ಇವುಗಳನ್ನು ನಿರ್ಮಿಸುವುದು ಸಂಪೂರ್ಣ ತಪ್ಪು ಎಂದು ವಾಸ್ತು ತಜ್ಞರು ಹೇಳಿದ್ದಾರೆ. ಈಶಾನ್ಯ, ದಕ್ಷಿಣ ಅಥವಾ ಆಗ್ನೇಯ ಭಾಗದಲ್ಲಿ ಶೌಚಾಲಯ ನಿರ್ಮಿಸಿದರೆ ಅದು ಆರೋಗ್ಯ, ಹಣಕಾಸು ಮತ್ತು ಕುಟುಂಬದ ಸೌಹಾರ್ದದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
  • ಕನ್ನಡಿ ಮತ್ತು ಬಾಗಿಲುಗಳ ನಿಯಮಗಳು: ಕನ್ನಡಿಯನ್ನು ಉತ್ತರ ಅಥವಾ ಪೂರ್ವ ಗೋಡೆಯಲ್ಲಿ ಇರಿಸುವುದು ಉತ್ತಮ. ಇದು ಪೂರ್ವದ ಧನಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸಲು ಸಹಾಯ ಮಾಡುತ್ತದೆ. ಕಪ್ಪು ಬಣ್ಣದ ಅಥವಾ ಅಲಂಕಾರಿಕ ಲೋಹದ ಬಾಗಿಲುಗಳನ್ನು ಬಳಕೆ ಮಾಡುವುದು ತಪ್ಪು. ಮರದ ಬಾಗಿಲುಗಳು ವಾಸ್ತು ಪ್ರಕಾರ ಉತ್ತಮ. ಶೌಚಾಲಯದ ಬಾಗಿಲು ಸದಾ ಮುಚ್ಚಿರಬೇಕು, ಏಕೆಂದರೆ ತೆರೆದ ಬಾಗಿಲುಗಳಿಂದ ನಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುತ್ತದೆ ಎಂದು ನಂಬಲಾಗುತ್ತದೆ.
  • ಸ್ನಾನಗೃಹದ ಬಣ್ಣಗಳ ಆಯ್ಕೆ: ಸ್ನಾನಗೃಹಕ್ಕೆ ತಿಳಿ ಬಣ್ಣಗಳು — ಬಿಳಿ, ಬೂದು, ನೀಲಿ, ಗುಲಾಬಿ ಮುಂತಾದವುಗಳು ಸೂಕ್ತ. ಇವು ಶಾಂತಿ ಮತ್ತು ಶುಚಿತ್ವವನ್ನು ಪ್ರತಿಬಿಂಬಿಸುತ್ತವೆ. ಕಪ್ಪು, ಗಾಢ ಕೆಂಪು ಅಥವಾ ಡಾರ್ಕ್ ನೀಲಿ ಬಣ್ಣಗಳನ್ನು ಬಳಕೆ ಮಾಡುವುದು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ವಾಸ್ತು ದೋಷ ನಿವಾರಣೆಯ ಪರಿಹಾರಗಳು:

  • ಶೌಚಾಲಯದೊಳಗೆ ಕರ್ಪೂರ ಅಥವಾ ಪರಿಮಳದ ಮೇಣದಬತ್ತಿಗಳನ್ನು ಹಚ್ಚುವುದು ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕುತ್ತದೆ.
  • ಮನಿ ಪ್ಲಾಂಟ್ ಅಥವಾ ಸ್ಪೈಡರ್ ಪ್ಲಾಂಟ್‌ಗಳಂತಹ ಒಳಾಂಗಣ ಸಸ್ಯಗಳನ್ನು ಇಡುವುದು ಶಕ್ತಿ ಸಮತೋಲನಕ್ಕೆ ಸಹಾಯಕ.
  • ಶೌಚಾಲಯದೊಳಗೆ ಸಮುದ್ರದ ಉಪ್ಪಿನ ಬಟ್ಟಲು ಇಡುವುದು ವಾಸ್ತು ದೋಷ ನಿವಾರಣೆಗೆ ಸಹಾಯಕ. ಇದನ್ನು ಪ್ರತೀ ವಾರ ಬದಲಾಯಿಸಬೇಕು.
  • ನೈಋತ್ಯ ದಿಕ್ಕಿನ ಶೌಚಾಲಯದ ಹೊರಗಡೆ ವಾಸ್ತು ಪಿರಮಿಡ್ ಇಡುವುದು ಶಕ್ತಿಯನ್ನು ಸಮತೋಲನಗೊಳಿಸುತ್ತದೆ.
error: Content is protected !!