Monday, November 10, 2025

Parenting| ಮಕ್ಕಳಲ್ಲಿ ಅರ್ಲಿ ಪೀರಿಯಡ್ಸ್‌ ಬರಬಾರದು ಅಂದ್ರೆ ಏನೆಲ್ಲಾ ಅವಾಯ್ಡ್‌ ಮಾಡ್ಬೇಕು?

ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಲ್ಲಿ “ಅರ್ಲಿ ಪೀರಿಯಡ್ಸ್‌” ಆರಂಭವಾಗುತ್ತಿರುವುದು ವೈದ್ಯಕೀಯವಾಗಿ ಗಮನ ಸೆಳೆದಿದೆ. ಇದಕ್ಕೆ ಅನೇಕ ಕಾರಣಗಳು ಇರಬಹುದು. ಆಹಾರ ಪದ್ಧತಿ, ಜೀವನಶೈಲಿ, ಒತ್ತಡ ಮತ್ತು ಪರಿಸರದ ಪರಿಣಾಮಗಳು ಪ್ರಮುಖವಾಗಿವೆ. ಮಕ್ಕಳಲ್ಲಿ ಆರೋಗ್ಯಕರ ಬೆಳವಣಿಗೆಗೆ ಈ ಹಂತ ತಡವಾಗಿ ಬರಬೇಕು ಎನ್ನುವುದು ತಜ್ಞರ ಅಭಿಪ್ರಾಯ. ಹಾಗಾದರೆ, ಯಾವ ಅಭ್ಯಾಸಗಳನ್ನು ತಪ್ಪಿಸಬೇಕು ಎನ್ನುವುದನ್ನು ನೋಡೋಣ.

  • ಜಂಕ್ ಫುಡ್‌ ಸೇವನೆ ಕಡಿಮೆ ಮಾಡಬೇಕು: ಬರ್ಗರ್, ಪಿಜ್ಜಾ, ಪ್ಯಾಕೇಜ್ಡ್ ಸ್ನ್ಯಾಕ್ಸ್‌ಗಳಂತಹ ಆಹಾರಗಳಲ್ಲಿ ಟ್ರಾನ್ಸ್‌ಫ್ಯಾಟ್ ಮತ್ತು ಹಾರ್ಮೋನ್‌ ಅಸಮತೋಲನ ಉಂಟುಮಾಡುವ ರಾಸಾಯನಿಕಗಳು ಇರುತ್ತವೆ. ಇವು ದೇಹದ ಒಳಗಿನ ಈಸ್ಟ್ರೋಜನ್ ಮಟ್ಟವನ್ನು ಹೆಚ್ಚಿಸಬಹುದು. ಆದ್ದರಿಂದ ಮಕ್ಕಳಿಗೆ ನೈಸರ್ಗಿಕ ಆಹಾರ — ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳು ಒಳಗೊಂಡ ಆಹಾರ ಹೆಚ್ಚು ನೀಡುವುದು ಉತ್ತಮ.
  • ಪ್ಲಾಸ್ಟಿಕ್ ಬಳಕೆ ತಪ್ಪಿಸಬೇಕು: ಪ್ಲಾಸ್ಟಿಕ್ ಬಾಟಲ್‌ಗಳು ಅಥವಾ ಪ್ಲಾಸ್ಟಿಕ್ ಕಂಟೇನರ್‌ಗಳಲ್ಲಿ ನೀರು ಅಥವಾ ಆಹಾರವನ್ನು ಇಡುವುದರಿಂದ ಹಾನಿಕರ ರಾಸಾಯನಿಕಗಳು ದೇಹಕ್ಕೆ ಸೇರುತ್ತವೆ. ಇವು “ಎಂಡೋಕ್ರೈನ್ ಡಿಸ್ರಪ್ಟರ್‌ಗಳು” ಎಂದು ಕರೆಯಲ್ಪಡುವುವ ರಾಸಾಯನಿಕವು ಹಾರ್ಮೋನ್ ಸಮತೋಲನವನ್ನು ಹಾಲು ಮಾಡುತ್ತದೆ. ಸ್ಟೀಲ್ ಅಥವಾ ಗಾಜಿನ ಪಾತ್ರೆಗಳಲ್ಲಿ ಆಹಾರ ನೀಡುವುದು ಸುರಕ್ಷಿತ.
  • ಸ್ಕ್ರೀನ್ ಟೈಮ್ ನಿಯಂತ್ರಿಸಬೇಕು: ಮೊಬೈಲ್, ಟಿವಿ ಅಥವಾ ಟ್ಯಾಬ್‌ಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮಕ್ಕಳ ಶಾರೀರಿಕ ಚಟುವಟಿಕೆ ಕಡಿಮೆಯಾಗುತ್ತದೆ. ಈ ಜೀವನಶೈಲಿಯು ದೇಹದ ತೂಕ ಹೆಚ್ಚಿಸುವ ಮೂಲಕ ಹಾರ್ಮೋನಲ್ ಬದಲಾವಣೆ ತರಬಹುದು. ಪ್ರತಿದಿನ ಹೊರ ಆಟ ಅಥವಾ ವ್ಯಾಯಾಮಕ್ಕೆ ಉತ್ತೇಜನ ನೀಡುವುದು ಅಗತ್ಯ.
  • ಸಕ್ಕರೆ ಮತ್ತು ಸಾಫ್ಟ್ ಡ್ರಿಂಕ್ಸ್ ತಪ್ಪಿಸಬೇಕು: ಅತಿಯಾದ ಸಕ್ಕರೆ ಸೇವನೆಯು ದೇಹದ ಕೊಬ್ಬಿನ ಪ್ರಮಾಣ ಹೆಚ್ಚಿಸುತ್ತದೆ. ಇದು ಕೂಡ ಪೀರಿಯಡ್ಸ್‌ ಬೇಗ ಬರುವ ಕಾರಣಗಳಲ್ಲಿ ಒಂದಾಗಿದೆ. ಬದಲಿಗೆ ನೈಸರ್ಗಿಕ ಪಾನೀಯಗಳಾದ ಹಾಲು, ತಾಜಾ ಹಣ್ಣಿನ ರಸ ಅಥವಾ ನೀರಿನ ಸೇವನೆಯನ್ನು ಪ್ರೋತ್ಸಾಹಿಸಬೇಕು.
  • ಒತ್ತಡ ಮತ್ತು ನಿದ್ರೆ ಕೊರತೆ ತಪ್ಪಿಸಬೇಕು: ಮಾನಸಿಕ ಒತ್ತಡವೂ ಹಾರ್ಮೋನ್ಗಳ ಮೇಲೆ ಪರಿಣಾಮ ಬೀರುತ್ತದೆ. ಪಾಠ, ಸ್ಪರ್ಧೆ ಅಥವಾ ಹೆತ್ತವರ ಮಾತಿನ ಒತ್ತಡದಿಂದ ಮಕ್ಕಳು ಮಾನಸಿಕ ಅಶಾಂತಿ ಅನುಭವಿಸಿದರೆ ದೇಹದ ಚಕ್ರ ಬದಲಾಗಬಹುದು. ಸಾಕಷ್ಟು ನಿದ್ರೆ ಮತ್ತು ಸಮತೋಲನದ ದಿನಚರಿಯು ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
error: Content is protected !!