ಭಾರತದ ಸ್ಟ್ರೀಟ್ ಫುಡ್‌ಗಳು ತನ್ನ ವೈವಿಧ್ಯಮಯ ರುಚಿ ಮತ್ತು ಸಾಂಸ್ಕೃತಿಕ ಪರಂಪರೆಯುಳ್ಳ ಆಹಾರದಿಂದ ಪ್ರಖ್ಯಾತ. ಆದರೆ ಆರೋಗ್ಯದ ದೃಷ್ಟಿಯಿಂದ ಎಲ್ಲ ಸ್ಟ್ರೀಟ್ ಫುಡ್‌ಗಳು ಸುರಕ್ಷಿತವಲ್ಲ. ಆದರೆ ಉತ್ತಮ ರುಚಿ ಕೊಡುತ್ತ ಆರೋಗ್ಯಕ್ಕೂ ಬೆಸ್ಟ್ ಆಗಿರೋ ಕೆಲವು ಸ್ಟ್ರೀಟ್ ಫುಡ್ ಆಯ್ಕೆಗಳು ಇದೆ.
- ಇಡ್ಲಿ: ಇಡ್ಲಿ ದಕ್ಷಿಣ ಭಾರತದ ಅತ್ಯಂತ ಆರೋಗ್ಯಕರ ತಿಂಡಿಯಾಗಿದೆ. ಅಕ್ಕಿ ಮತ್ತು ಉದ್ದಿನಬೇಳೆಯನ್ನು ಹುದುಗಿಸಿ ಹಬೆಯಲ್ಲಿ ಬೇಯಿಸುವ ಮೂಲಕ ತಯಾರಿಸಲಾಗುತ್ತದೆ. ಕಡಿಮೆ ಕ್ಯಾಲೊರಿ, ಎಣ್ಣೆಯಿಲ್ಲದ ಈ ತಿಂಡಿ ತೂಕ ಇಳಿಸುವವರಿಗೂ ಉಪಯುಕ್ತ. ಹುದುಗುವಿಕೆಯಿಂದ ಉಂಟಾಗುವ ಪ್ರೋಬಯಾಟಿಕ್ ಅಂಶಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ, ಜೊತೆಗೆ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳ ಸಮತೋಲನ ದೇಹಕ್ಕೆ ಅಗತ್ಯ ಶಕ್ತಿಯನ್ನು ಒದಗಿಸುತ್ತದೆ.
- ಚನಾ ಚಾಟ್: ಚನಾ ಚಾಟ್ ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಶ್ರೀಮಂತವಾಗಿದ್ದು, ಪೌಷ್ಟಿಕಾಂಶಯುಕ್ತ ಲಘು ತಿಂಡಿಯಾಗಿದೆ. ಬೇಯಿಸಿದ ಕಡಲೆ, ಟೊಮೇಟೋ, ಈರುಳ್ಳಿ, ಸೌತೆಕಾಯಿ ಮತ್ತು ಮಸಾಲೆಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಇದರಲ್ಲಿರುವ ಪ್ರೋಟೀನ್ ಮತ್ತು ಫೈಬರ್ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ. ಕಡಲೆಯಲ್ಲಿ ಕಬ್ಬಿಣ, ಮೆಗ್ನೀಷಿಯಂ ಮತ್ತು ಇತರೆ ಖನಿಜಾಂಶಗಳಿರುವುದರಿಂದ ದೇಹದ ಶಕ್ತಿ ಹೆಚ್ಚುತ್ತದೆ ಮತ್ತು ರೋಗ ನಿರೋಧಕ ಶಕ್ತಿಯು ಸುಧಾರಿಸುತ್ತದೆ.
- ಧೋಕ್ಲಾ: ಗುಜರಾತಿನ ಪ್ರಸಿದ್ಧ ಧೋಕ್ಲಾ ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ಪೋಷಕಾಂಶಗಳಿರುವ ತಿಂಡಿಯಾಗಿದೆ. ಹುದುಗಿಸಿದ ಕಡಲೆ ಹಿಟ್ಟಿನಿಂದ ತಯಾರಿಸಿ ಹಬೆಯಲ್ಲಿ ಬೇಯಿಸುವುದರಿಂದ ಕಡಿಮೆ ಎಣ್ಣೆ ಮತ್ತು ಕ್ಯಾಲೊರಿಯಾಗಿರುತ್ತದೆ.
- ಪೋಹಾ: ಪೋಹಾ ತೆಳುವಾಗಿ ಒತ್ತಿದ ಅಕ್ಕಿಯಿಂದ ತಯಾರಿಸಲಾಗುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. ಸಾಮಾನ್ಯವಾಗಿ ಈರುಳ್ಳಿ, ಅರಿಶಿನ, ಕರಿಬೇವು ಮತ್ತು ನೆಲಗಡಲೆ ಸೇರಿಸಿ ರುಚಿಕರವಾಗಿ ಮಾಡಲಾಗುತ್ತದೆ. ಇದರಲ್ಲಿರೋ ಫೈಬರ್‌ನಿಂದ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯವಾಗುತ್ತದೆ ಮತ್ತು ಕಡಿಮೆ ಕ್ಯಾಲೊರಿಯಾದ ಆಹಾರವಾಗಿರುವುದರಿಂದ ದೇಹದ ತೂಕವನ್ನು ನಿಯಂತ್ರಿಸಲು ಸಹಕಾರಿ.
- ಜೋಳ (ಕಾರ್ನ್): ಬೀದಿಗಳಲ್ಲಿ ಸುಟ್ಟ ಅಥವಾ ಬೇಯಿಸಿದ ಜೋಳದ ತೆನೆ ಆರೋಗ್ಯಕರ ಮತ್ತು ಪೌಷ್ಟಿಕತಯುಕ್ತ ತಿಂಡಿಯಾಗಿದೆ. ಉಪ್ಪು, ಮೆಣಸಿನ ಪುಡಿ ಮತ್ತು ನಿಂಬೆ ರಸದೊಂದಿಗೆ ಸೇವಿಸುವ ಈ ತಿಂಡಿ ಫೈಬರ್, ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಲ್ಲಿ ಶ್ರೀಮಂತವಾಗಿದೆ. ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ವಿಟಮಿನ್ ಸಿ ಚರ್ಮದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಮತ್ತು ಆ್ಯಂಟಿಆಕ್ಸಿಡೆಂಟ್ ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ.

