ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ತಮ್ಮ ಸರ್ಕಾರದ ಮೊದಲ ಪ್ರಮುಖ ಸಚಿವ ಸಂಪುಟ ಪುನರ್‌ರಚನೆ ನಡೆಸಿದ್ದಾರೆ. ಈ ಹೊಸ ಸಂಪುಟದಲ್ಲಿ 26 ಮಂದಿ ಸಚಿವರು ಸ್ಥಾನ ಪಡೆದಿದ್ದು, ಮಾಜಿ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ಹಾಗೂ ಬಿಜೆಪಿ ಶಾಸಕಿ ರಿವಾಬಾ ಜಡೇಜಾ ಕೂಡ ಹೊಸ ಮುಖಗಳ ಪಟ್ಟಿಯಲ್ಲಿ ಗಮನ ಸೆಳೆದಿದ್ದಾರೆ. ಹೊಸ ಸಂಪುಟದ ಪ್ರಮಾಣವಚನ ಸಮಾರಂಭವು ಶುಕ್ರವಾರ ಸಂಜೆ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರ ಸಮ್ಮುಖದಲ್ಲಿ ನಡೆಯಲಿದೆ.
ಹೊಸ ಸಂಪುಟದಲ್ಲಿ ಯುವ ಮುಖಗಳಿಗೆ ಆದ್ಯತೆ ನೀಡಲಾಗಿದ್ದು, ಕೇವಲ 40 ವರ್ಷದ ಹರ್ಷ್ ಸಾಂಘ್ವಿ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ. ಗುಜರಾತ್ ಇತಿಹಾಸದಲ್ಲೇ ಅತಿ ಕಿರಿಯ ಡಿಸಿಎಂ ಎನ್ನುವ ಗೌರವವೂ ಇವರದಾಗಿದೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ರನ್ನು ಹೊರತುಪಡಿಸಿ ಇಡೀ ಹಿಂದಿನ ಸಂಪುಟ ಗುರುವಾರ ರಾಜೀನಾಮೆ ನೀಡಿತ್ತು. ರಾಜ್ಯಪಾಲರನ್ನು ಭೇಟಿ ಮಾಡಿದ ಸಿಎಂ ಪಟೇಲ್ ಅವರು ಹೊಸ ಸಚಿವರ ಪಟ್ಟಿಯನ್ನು ಸಲ್ಲಿಸಿ, ಅನುಮೋದನೆ ಪಡೆದ ನಂತರ ಹೊಸ ಕ್ಯಾಬಿನೆಟ್ ರಚಿಸಿದರು.
ಹೊಸ ಸಂಪುಟದಲ್ಲಿ ಮೂರು ಮಹಿಳೆಯರು ಸ್ಥಾನ ಪಡೆದಿದ್ದು, ಮನೀಷಾ ವಕೀಲ್, ರಿವಾಬಾ ಜಡೇಜಾ ಮತ್ತು ದರ್ಶನಾ ವಘೇಲಾ ಅವರು ಸಚಿವೆಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮನೀಷಾ ವಕೀಲ್ ಅವರು ಹಿಂದೆಯೂ ಸಚಿವೆಯಾಗಿ ಸೇವೆ ಸಲ್ಲಿಸಿದ್ದರೆ, ರಿವಾಬಾ ಮತ್ತು ದರ್ಶನಾ ಇಬ್ಬರೂ ಮೊದಲ ಬಾರಿಗೆ ಸಂಪುಟಕ್ಕೆ ಪ್ರವೇಶಿಸಿದ್ದಾರೆ.
ಹೊಸ ಸಚಿವರ ಪಟ್ಟಿ ಇಲ್ಲಿದೆ:
ಭೂಪೇಂದ್ರ ರಜನಿಕಾಂತ್ ಪಟೇಲ್
ತ್ರಿಕಂ ಬಿಜಲ್ ಛಂಗ
ಸ್ವರೂಪ್‌ಜಿ ಸರ್ದಾರ್ಜಿ ಠಾಕೂರ್
ಪ್ರವೀಣ್‌ಕುಮಾರ್ ಮಾಲಿ
ಋಷಿಕೇಶ್ ಗಣೇಶಭಾಯಿ ಪಟೇಲ್
ಪಿ.ಸಿ. ಬರಂಡ
ದರ್ಶನ ಎಂ ವಘೇಲಾ
ಕಾಂತ್ರತಲಾಲ್ ಶಿವಲಾಲ್ ಅಮೃತಿಯಾ
ಕುಂವರ್ಜಿಭಾಯ್ ಮೋಹನ್ ಭಾಯಿ ಬವಲಿಯಾ
ರಿವಾಬಾ ರವೀಂದ್ರಸಿಂಹ ಜಡೇಜಾ
ಅರ್ಜುನ್‌ಭಾಯ್ ದೇವಾಭಾಯ್ ಮೋಧ್ವಾಡಿಯಾ
ಡಾ. ಪ್ರದ್ಯುಮನ್ ವಾಜ
ಕೌಶಿಕ್ ಕಾಂತಿಭಾಯ್ ವೆಕಾರಿಯ
ಪಾರ್ಷೋತ್ತಂಭಾಯಿ ಒ. ಸೋಲಂಕಿ
ಜಿತೇಂದ್ರಭಾಯಿ ಸಾವಜಿಭಾಯಿ ವಘಾನಿ
ರಮಣಭಾಯ್ ಭಿಖಾಭಾಯ್ ಸೋಲಂಕಿ
ಕಮಲೇಶಭಾಯ್ ರಮೇಶ್ಭಾಯ್ ಪಟೇಲ್
ಸಂಜಯ್‌ಸಿಂಹ ರಾಜಯಸಿಂಹ ಮಹೀದಾ
ರಮೇಶ್‌ಭಾಯ್ ಭೂರಾಭಾಯಿ ಕಟಾರ
ಮನೀಷಾ ರಾಜೀವ್‌ಭಾಯ್ ವಕೀಲ್
ಈಶ್ವರ್‌ಸಿನ್ಹ್ ಠಾಕೋರ್‌ಭಾಯ್ ಪಟೇಲ್
ಪ್ರಫುಲ್ ಪನ್ಸೇರಿಯಾ
ಹರ್ಷ್ ಸಾಂಘ್ವಿ
ಡಾ. ಜಯರಾಮ್‌ಭಾಯ್ ಚೆಮಾಭಾಯ್ ಗಮಿತ್
ನರೇಶ್‌ಭಾಯ್ ಮಗನ್‌ಭಾಯ್ ಪಟೇಲ್