ಇತ್ತೀಚಿನ ದಿನಗಳಲ್ಲಿ ಚಿಪ್ಸ್, ಬಿಸ್ಕತ್ತು ಮತ್ತು ಚಾಕೊಲೇಟ್‌ಗಳನ್ನು ಹೆಚ್ಚು ತಿನ್ನುವ ಅಭ್ಯಾಸವು ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಮನೆಯಲ್ಲೇ ರುಚಿಕರ ಹಾಗೂ ಆರೋಗ್ಯಕರ ತಿಂಡಿ ತಯಾರಿಸುವುದು ಉತ್ತಮ. ಅಕ್ಕಿ ಹಿಟ್ಟಿನಿಂದ ತಯಾರಿಸಬಹುದಾದ ಕ್ರಿಸ್ಪಿ ಮತ್ತು ಟೇಸ್ಟಿ ನಿಪ್ಪಟ್ಟು ಒಂದು ಉತ್ತಮ ಆಯ್ಕೆ. ಈ ತಿಂಡಿ ಕೇವಲ ಮಕ್ಕಳಿಗಲ್ಲ, ಎಲ್ಲ ವಯಸ್ಸಿನವರಿಗೂ ಇಷ್ಟವಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು – ಅರ್ಧ ಕಿಲೋ
ಹುರಿದ ಶೇಂಗಾ – 3 ಟೀಸ್ಪೂನ್
ಎಳ್ಳು – 1 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಹಸಿ ಮೆಣಸಿನಕಾಯಿ – 3
ಕೊತ್ತಂಬರಿ ಸೊಪ್ಪು – 1 ಕಟ್ಟು (ಸಣ್ಣದಾಗಿ ಕತ್ತರಿಸಿದ್ದು)
ಕರಿಬೇವು – ಹಿಡಿಯಷ್ಟು
ಖಾರದ ಪುಡಿ – 1 ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ಎಣ್ಣೆ – ಕರಿಯಲು ಬೇಕಾದಷ್ಟು
ಕಡಲೆ ಬೇಳೆ – 1 ಟೀಸ್ಪೂನ್
ತಯಾರಿಸುವ ವಿಧಾನ:
ಮೊದಲಿಗೆ ಅಕ್ಕಿ ಹಿಟ್ಟನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ. ಹಸಿ ಮೆಣಸಿನಕಾಯಿ, ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪನ್ನು ತರಿತರಿಯಾಗಿ ಮಿಕ್ಸರ್‌ನಲ್ಲಿ ಪುಡಿಮಾಡಿ. ಈ ಪುಡಿಯನ್ನು ಹಿಟ್ಟಿನಲ್ಲಿ ಹಾಕಿ, ಹುರಿದ ಶೇಂಗಾ, ಎಳ್ಳು, ಕರಿಬೇವು, ಖಾರದ ಪುಡಿ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಜೊತೆಗೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆ ಸೇರಿಸಿ ಹಿಟ್ಟನ್ನು ಸಾಫ್ಟ್ ಆಗುವಂತೆ ಬೆರೆಸಿ.
ಬೆಚ್ಚಗಿನ ನೀರನ್ನು ನಿಧಾನವಾಗಿ ಸೇರಿಸಿ, ಗಟ್ಟಿಯಾದ ಹಿಟ್ಟನ್ನು ತಯಾರಿಸಿ. ಈ ಹಿಟ್ಟಿನಿಂದ ಚಿಕ್ಕ ಉಂಡೆಗಳನ್ನು ಮಾಡಿ, ಸಣ್ಣ ಪೂರಿಯಂತೆ ತಟ್ಟೆ ಮೇಲೆ ಲಟ್ಟಿಸಿ. ಎಣ್ಣೆ ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ ನಿಪ್ಪಟ್ಟುಗಳನ್ನು ಹೊಂಬಣ್ಣ ಬರುವವರೆಗೆ ಹುರಿಯಿರಿ.