Saturday, October 18, 2025

ಪಾಕ್ -ಅಫ್ಘಾನ್ ಗಡಿ ಬಳಿ ಮತ್ತೆ ಆತ್ಮಾಹುತಿ ಬಾಂಬ್ ದಾಳಿ: 7 ಪಾಕಿಸ್ತಾನಿ ಯೋಧರು ಬಲಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಅಫ್ಘಾನ್ ಗಡಿ ಬಳಿ ಮತ್ತೊಂದು ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಕನಿಷ್ಠ 7 ಪಾಕಿಸ್ತಾನಿ ಯೋಧರು ಸಾವನ್ನಪ್ಪಿದ್ದಾರೆ.

ಇಸ್ಲಾಮಾಬಾದ್ ಹಾಗೂ ಕಾಬೂಲ್ ನಡುವೆ ಕದನವಿರಾಮ ಘೋಷಣೆಯಾದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಎರಡು ದೇಶಗಳ ನಡುವೆ ತೀವ್ರವಾದ ಯುದ್ಧದ ನಂತರ ದಿನಗಳ ಹಿಂದಷ್ಟೇ ಕದನ ವಿರಾಮ ಘೋಷಣೆಯಾಗಿತ್ತು. ಆದರೆ ಈಗ ಮತ್ತೆ ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್‌ ಸಂಘಟನೆಗೆ ಸೇರಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 7 ಪಾಕಿಸ್ತಾನಿ ಯೋಧರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಉತ್ತರ ವಜರಿಸ್ತಾನದ ಮಿಲಿಟರಿ ಕ್ಯಾಂಪ್ ಮೇಲೆ ಭಯೋತ್ಪಾದಕರು ದಾಳಿ ಮಾಡಿದ ನಂತರ ಈ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ 13 ಜನ ಗಾಯಗೊಂಡಿದ್ದಾರೆ. ಸ್ಪೋಟಕ ತುಂಬಿದ್ದ ವಾಹನವನ್ನು ಭಯೋತ್ಪಾದಕನೋರ್ವ ಮಿಲಿಟರಿ ಕ್ಯಾಂಪ್‌ನ ತಡೆಗೋಡೆಗೆ ಡಿಕ್ಕಿ ಹೊಡೆಸಿದ ನಂತರ ಈ ದುರಂತ ಸಂಭವಿಸಿದೆ. ಈ ವೇಳೆ ಇನ್ನೂ ಇಬ್ಬರು ಭಯೋತ್ಪಾದಕರು ಈ ಮಿಲಿಟರಿ ಕ್ಯಾಂಪ್‌ನ ಒಳಗೆ ನುಗ್ಗಲು ಯತ್ನಿಸಿದ್ದು, ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.

ದಕ್ಷಿಣ ಏಷ್ಯಾದ ಈ ನೆರೆಹೊರೆಯ ದೇಶಗಳು ಭಾರಿ ಕಾಳಗದಲ್ಲಿ ತೊಡಗಿದ್ದು, ಪಾಕಿಸ್ತಾನವೂ ಇಲ್ಲಿ ಹಲವು ವಾಯುದಾಳಿಯನ್ನು ನಡೆಸಿದೆ. ಈ ದಾಳಿಯಲ್ಲಿ 12ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಪಾಕಿಸ್ತಾನದಲ್ಲಿ ದಾಳಿಗಳನ್ನು ಹೆಚ್ಚಿಸಿರುವ ಉಗ್ರಗಾಮಿಗಳನ್ನು ಕಾಬೂಲ್ ನಿಯಂತ್ರಿಸಬೇಕೆಂದು ಇಸ್ಲಾಮಾಬಾದ್ ಒತ್ತಾಯಿಸಿದ ನಂತರ ಹಾಗೂ ಅವರು ಅಫ್ಘಾನಿಸ್ತಾನದ ಸ್ವರ್ಗದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿಕೊಂಡ ನಂತರ ಉಭಯ ದೇಶಗಳ ನಡುವೆ ಸಂಘರ್ಷ ಭುಗಿಲೆದ್ದಿತು.

error: Content is protected !!