ಹೊಸ ದಿಗಂತ ಡಿಜಿಟಲ್ ಡೆಸ್ಕ್:
21ನೇ ಶತಮಾನವು ಭಾರತಕ್ಕೇ ಸೀಮಿತವಾಗಿದೆ,ನಾಲ್ಕು ಅಥವಾ ಐದು ದಶಕಗಳವೆರೆಗೆ ಭಾರತದ ಯಾವುದೇ ಪ್ರಧಾನಿಯಾಗಿರಲಿ ʼಮುಕ್ತ ವಿಶ್ವ ನಾಯಕʼ ಎಂಬ ಪಟ್ಟವನ್ನು ಅಮೆರಿಕಾದಿಂದ ತನ್ನದಾಗಿಸಿಕೊಳ್ಳಬಹುದು ಎಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬಾಟ್ ಹೇಳಿದ್ದಾರೆ.
ವಿಶ್ವ ಶೃಂಗಸಭೆ 2025ರಲ್ಲಿ ಶುಕ್ರವಾರ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಪ್ರಭಾವಶಾಲಿ ರಾಷ್ಟ್ರವಾದ ಭಾರತ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ವಿರುದ್ದ ಪ್ರಜಾಪ್ರಭುತ್ವದ ಅತಿದೊಡ್ಡ ಶಕ್ತಿಯಾಗಿಯಾಗುವುದರ ಜೊತೆಗೆ ಆಸ್ಟ್ರೇಲಿಯಾದ ದೃಢವಾದ, ವಿಶ್ವಾಸಾರ್ಹ ಪಾಲುದಾರನಾಗಿ ದೆಹಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಕರೆ ನೀಡಿದರು.
ಭಾರತವು ಆಸ್ಟ್ರೇಲಿಯಾ ಹಾಗೂ ಬ್ರಿಟನ್ ನೊಂದಿಗೆ ಮಾಡಿಕೊಂಡ ಮುಕ್ತ ವ್ಯಾಪಾರ ಒಪ್ಪಂದಗಳಿಂದ ಪ್ರಜಾಪ್ರಭುತ್ವದ ಜಗತ್ತು ಚೀನಾದಿಂದ ದೂರ ಸರಿಯುತ್ತಿರುವ ಸಂಕೇತವಾಗಿದೆ ಎಂದರು.
ಭಾರತ ಚೀನಾ, ಪಾಕಿಸ್ತಾನ ಹಾಗೂ ಅಮೆರಿಕಾಗಳ ನಡುವೆ ಹೊಂದಿರುವ ಸಂಬಂಧಗಳನ್ನು ಕುರಿತು ವಿವರಿಸುತ್ತಾ, ವಿಶ್ವವನ್ನು ಆಳುವ ಬಯಕೆಯಿರುವ ಚೀನಾದ ಮಹತ್ವಾಕಾಂಕ್ಷೆಗಳನ್ನು ನಿಯಂತ್ರಿಸುವ ಶಕ್ತಿ ಭಾರತಕ್ಕಿದೆ ಎಂದ ಅವರು ಚೀನಾ ಪ್ರಾಬಲ್ಯ ಸಾಧಿಸಲು ಬಯಸುತ್ತದೆ ಇದು ಚೀನಾದ ಎಲ್ಲಾ ನೆರೆಹೊರೆಯವರಿಗೆ ಹಾಗೂ ಜಗತ್ತಿಗೆ ತೊಂದರೆ ಉಂಟು ಮಾಡುತ್ತದೆ ಎಂದರು.
ಭಾರತವು ಚೀನಾಕ್ಕೆ ಪ್ರತಿಭಾರವಾಗಿದೆ. ಇಲ್ಲಿ ಹೆಚ್ಚು ಜನಸಂಖ್ಯೆ ಇದೆ. ಯಾವುದೇ ಭಾರತೀಯ ನಗರಕ್ಕೆ ಹೋದರೂ ಮೂಲಸೌಕರ್ಯ, ಹೊಸ ವಿಮಾನ ನಿಲ್ದಾಣಗಳು ಇವೆ. ಇದು ಚೀನಾಕ್ಕೆ ಪರ್ಯಾಯವಾಗಿದೆ. 21ನೇ ಶತಮಾನವು ಚೀನಾಕ್ಕೆ ಸೇರಿದಂತೆಯೇ ಭಾರತಕ್ಕೂ ಸೇರಿದೆ ಎಂದು ಅವರು ತಿಳಿಸಿದರು.
ಭಾರತದೊಂದಿಗೆ ಸಂಬಂಧ ಹೊಂದುವುದರಿಂದ ಮೂರು ದೊಡ್ಡ ಪ್ರಯೋಜನಗಳಿವೆ. ಪ್ರಜಾಪ್ರಭುತ್ವ, ಕಾನೂನಿನ ನಿಯಮ ಮತ್ತು ಇಂಗ್ಲಿಷ್. ಕೆಲವು ದಶಕಗಳ ಹಿಂದೆ ಚೀನಾ ಸಾಧಿಸಿದ ಆರ್ಥಿಕ ಮತ್ತು ಮಿಲಿಟರಿ ಶಕ್ತಿ ಪಡೆಯಲು ಕೂಡ ಭಾರತ ತಯಾರಿ ನಡೆಸುತ್ತಿದೆ ಎಂದು ಅವರು ಹೇಳಿದರು.
ನಾನು ಪ್ರಧಾನಿಯಾಗಿದ್ದಾಗ ‘ಭಾರತವು ಪ್ರಜಾಪ್ರಭುತ್ವದ ಮಹಾಶಕ್ತಿಯಾಗಿ ಹೊರಹೊಮ್ಮಲಿದೆ’ ಎಂದು ಹೇಳುತ್ತಿದ್ದೆ. ಈಗ ಅದು ನಿಜವಾಗುತ್ತಿದೆ. ಮುಂದಿನ 40–50 ವರ್ಷಗಳಲ್ಲಿ ಭಾರತದ ಪ್ರಧಾನಿಯೇ ‘ಮುಕ್ತ ವಿಶ್ವದ ನಾಯಕ’ನಾಗುವ ಸಾಧ್ಯತೆ ಇದೆ ಎಂದು ಅಬ್ಬಾಟ್ ಅಭಿಪ್ರಾಯ ಪಟ್ಟಿದ್ದಾರೆ.