Saturday, October 18, 2025

ನಿಮ್ಮ ಸಾಧನೆಗೆ ಹೆಮ್ಮೆ ಇದೆ…ಮಿನಿಸ್ಟರ್‌ ರಿವಾಬಾಗೆ ಬಂತು ಪತಿ ಜಡೇಜಾಯಿಂದ ವಿಶ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್‌ ಸರ್ಕಾರದಲ್ಲಿ ನೂತನ ಕ್ಯಾಬಿನೆಟ್‌ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಿವಾಬಾಗೆ ಕ್ರಿಕೆಟಿಗ, ಪತಿ ರವೀಂದ್ರ ಜಡೇಜಾ ಅಭಿನಂದನೆ ತಿಳಿಸಿದ್ದಾರೆ.

‘ನಿಮ್ಮ ಮತ್ತು ನಿಮ್ಮ ಸಾಧನೆಗಳ ಬಗ್ಗೆ ತುಂಬಾ ಹೆಮ್ಮೆ ಇದೆ. ನೀವು ಅದ್ಭುತ ಕೆಲಸ ಮಾಡುತ್ತಲೇ ಇರುತ್ತೀರಿ. ಎಲ್ಲಾ ವರ್ಗದ ಜನರಿಗೂ ಸ್ಫೂರ್ತಿಯಾಗುತ್ತೀರಿ ಎಂದು ನಾನು ಭಾವಿಸಿದ್ದೇನೆ. ಗುಜರಾತ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ನಿಮಗೆ ಉತ್ತಮ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಜೈ ಹಿಂದ್’ ಎಂದು ಪತ್ನಿಗೆ ಜಡೇಜಾ ಎಕ್ಸ್‌ ಪೋಸ್ಟ್‌ ಮೂಲಕ ವಿಶ್‌ ಮಾಡಿದ್ದಾರೆ.‌

ಗುಜರಾತ್‌ನಲ್ಲಿಂದು ನಡೆದ ಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಸೇರಿ 26 ಸಚಿವರೂ ಪ್ರಮಾಣ ಸ್ವೀಕರಿಸಿದರು.

error: Content is protected !!