Saturday, October 18, 2025

CINE | ಬಾಕ್ಸ್ ಆಫೀಸ್ ನಲ್ಲಿ ‘ಕಾಂತಾರ:1’ ಹವಾ ಜೋರು: 15 ದಿನದ ಗಳಿಕೆ ಎಷ್ಟು ಗೊತ್ತಾ? ಶಾಕ್ ಆಗ್ತೀರಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ಅಭಿನಯದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಶೋಗಳ ಸಂಖ್ಯೆ ಸ್ವಲ್ಪ ಕಡಿಮೆಯಾದರೂ, ಚಿತ್ರದ ಪ್ರಭಾವ ಕಡಿಮೆಯಾಗಿಲ್ಲ. ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿರುವ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ತನ್ನ ಅದ್ಭುತ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ಇದೀಗ ಚಿತ್ರದ ಅಧಿಕೃತ ಗಳಿಕೆಯ ವಿವರವನ್ನು ಹಂಚಿಕೊಂಡಿದ್ದು, ಅದು ನಿಜಕ್ಕೂ ಅಚ್ಚರಿ ಮೂಡಿಸಿದೆ.

ವಿಶ್ವದಾದ್ಯಂತ ಕೇವಲ 15 ದಿನಗಳಲ್ಲಿ ‘ಕಾಂತಾರ: ಚಾಪ್ಟರ್ 1’ 717.50 ಕೋಟಿ ರೂ. ಗಳಿಕೆ ಮಾಡಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ ಮೂಲಕ ಸಿನಿಮಾ 2025ರ ಅತ್ಯಧಿಕ ಗಳಿಕೆ ಮಾಡಿದ ಭಾರತೀಯ ಚಿತ್ರಗಳಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ. ವರದಿಗಳ ಪ್ರಕಾರ, ಈ ವರ್ಷ ಯಾವುದೇ ಸಿನಿಮಾ ಈ ದಾಖಲೆಯನ್ನು ಮುರಿಯುವ ಸಾಧ್ಯತೆ ಅಲ್ಪವಾಗಿದೆಯೆಂಬ ಮಾತು ಕೇಳಿಬಂದಿದೆ.

ರಜನಿಕಾಂತ್ ಅವರ ‘ಕೂಲಿ’ ಸಿನಿಮಾ ಹಿಂದಿನ ದಾಖಲೆ 650 ಕೋಟಿ ರೂ.ಗಳಾಗಿತ್ತು. ಆದರೆ ‘ಕಾಂತಾರ: ಚಾಪ್ಟರ್ 1’ ಅದನ್ನು ಸುಲಭವಾಗಿ ಮೀರಿ ಹೊಸ ಇತಿಹಾಸ ಬರೆದಿದೆ. ಜೊತೆಗೆ ಹೊಸಬರ ‘ಸೈಯಾರ’ ಚಿತ್ರದ 575 ಕೋಟಿ ರೂ.ಗಳ ಕಲೆಕ್ಷನ್‌ನನ್ನೂ ಹಿಂದಿಕ್ಕಿದೆ.

ಚಿತ್ರದ ಯಶಸ್ಸು ಕೇವಲ ಕನ್ನಡದಲ್ಲೇ ಸೀಮಿತವಾಗಿಲ್ಲ. ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಈ ಸಿನಿಮಾ ಭಾರೀ ಪ್ರತಿಕ್ರಿಯೆ ಪಡೆದಿದೆ. ಹಿಂದಿ ವರ್ಷನ್‌ನಿಂದ ಮಾತ್ರ ಭಾರತದಲ್ಲಿ 165 ಕೋಟಿ ರೂ., ತೆಲುಗು ವರ್ಷನ್‌ನಿಂದ 105 ಕೋಟಿ ರೂ., ಕರ್ನಾಟಕದಿಂದ 200 ಕೋಟಿ ರೂ. ಹಾಗೂ ತಮಿಳು ಮತ್ತು ಮಲಯಾಳಂ ವರ್ಷನ್‌ಗಳಿಂದ ತಲಾ 50 ಕೋಟಿ ರೂ. ಗಳಿಕೆ ಆಗಿರುವುದು ವರದಿ ತಿಳಿಸಿದೆ. ಹೀಗೆ, ಎಲ್ಲ ಭಾಷೆಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಸಿನಿಮಾ ಹೊಸ ದಾಖಲೆಯತ್ತ ಸಾಗುತ್ತಿದೆ.

error: Content is protected !!