Saturday, October 18, 2025

‘ಕೌನ್ ಬನೇಗಾ ಕರೋಡ್ಪತಿ’ ಶೋನಲ್ಲಿ ಶೆಟ್ರು ಗೆದ್ದ ಹಣ ಎಷ್ಟು? ಏನೆಲ್ಲಾ ಸಿಕ್ತು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ರಿಷಬ್ ಶೆಟ್ಟಿ ಅಮಿತಾಭ್ ಬಚ್ಚನ್ ನಿರ್ವಹಿಸುವ ಪ್ರಸಿದ್ಧ ಕ್ವಿಜ್ ಶೋ ಕೌನ್ ಬನೇಗಾ ಕರೋಡ್ಪತಿಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಚಿತ್ರ ನಿರ್ದೇಶನ ಸಹ ಮಾಡಿದ್ದ ರಿಷಬ್ ಶೆಟ್ಟಿ, ತಮ್ಮ ಕೆಲಸದ ಮೂಲಕ ಕನ್ನಡ ಹಾಗೂ ಪರಭಾಷಾ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ.

ಶೋದಲ್ಲಿ ಭಾಗವಹಿಸಿದ ರಿಷಬ್ ಶೆಟ್ಟಿ ತಮ್ಮ ಫೌಂಡೇಷನ್ ಕುರಿತು ಪ್ರಸ್ತಾವನೆ ನೀಡಿದರು. “ನನ್ನ ರಿಷಬ್ ಫೌಂಡೇಷನ್ ಮೂಲಕ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಮತ್ತು ದೈವ ನರ್ತಕರಿಗೆ ಸಹಾಯ ಮಾಡಬೇಕು ಎಂಬ ಆಶಯವಿದೆ,” ಎಂದು ತಿಳಿಸಿದ್ದಾರೆ. ಈ ವಿಚಾರಕ್ಕೆ ಅಮಿತಾಭ್ ಬಚ್ಚನ್ ಸಂತೋಷ ವ್ಯಕ್ತಪಡಿಸಿದ್ದಾರೆ.

ಶೋದಲ್ಲಿ ಮೊದಲು 50 ಸಾವಿರ ರೂ. ಮೌಲ್ಯದ, ಲಾಫಿಂಗ್ ಬುದ್ಧನ ಸಂಬಂಧಿತ ವಿಷಯ ಕೇಳಲಾಯಿತು. ರಿಷಬ್ ಶೆಟ್ಟಿ ಸರಿಯಾದ ಉತ್ತರ ನೀಡಿದ ನಂತರ, ಮುಂದಿನ 12 ಪ್ರಶ್ನೆಗಳನ್ನು ಯಶಸ್ವಿಯಾಗಿ ಎದುರಿಸಿದರು, “ಇಂಡೋನೇಷ್ಯಾದಲ್ಲಿರುವ ಜೀವಂತ ಜ್ವಾಲಾಮುಖಿ ಕೆಳಗೆ ಯಾವ ಹಿಂದೂ ದೇವರು ಇದೆ?” ಎಂಬ ಪ್ರಶ್ನೆಗೆ ಲೈಫ್ಲೈನ್ ಉಪಯೋಗಿಸಿ, ರಿಷಬ್ ಸರಿಯಾಗಿ ‘ಗಣಪತಿ’ ಎಂದು ಉತ್ತರಿಸಿದರು.

ಈ ಮೂಲಕ ಅವರು 12,50,000 ಸಾವಿರ ರೂ. ಗೆದ್ದು ತಮ್ಮ ಫೌಂಡೇಷನ್‌ಗೆ ಹಣವನ್ನು ದಾನ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಸ್ಪಾನ್ಸರ್ ಮೂಲಕ 1,500 ಕೆಜಿ ಅಕ್ಕಿ, 1,500 ಕೆಜಿ ಗೋಧಿ ಮತ್ತು 1,500 ಕೆಜಿ ತುಪ್ಪವನ್ನು ಸಹ ಫೌಂಡೇಷನ್‌ಗೆ ನೀಡುವ ಘೋಷಣೆ ಮಾಡಿದ್ದಾರೆ. ಜೊತೆಗೆ, ‘ಹಿರೋ ಎಕ್ಸ್‌ಟ್ರೀಮ್ 125’ ಬೈಕ್ ಕೂಡ ಫೌಂಡೇಷನ್‌ಗೆ ವಿತರಣೆ ಮಾಡಲಾಗಲಿದೆ ಎಂದು ತಿಳಿಸಿದ್ದಾರೆ.

error: Content is protected !!