Monday, October 20, 2025

ಮೊಜಾಂಬಿಕ್​ನ ಬೀರಾ ಬಂದರಿನಲ್ಲಿ ಮುಗುಚಿದ ಬೋಟ್: ಮೂವರು ಭಾರತೀಯರು ಸಾವು, ಐವರು ನಾಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೂರ್ವ ಆಫ್ರಿಕಾದ ಮೊಜಾಂಬಿಕ್​ನ ಬೀರಾ ಬಂದರಿನ ಕರಾವಳಿ ಪ್ರದೇಶದಲ್ಲಿ ದೋಣಿ ಮಗುಚಿಬಿದ್ದ ಪರಿಣಾಮ ಮೂವರು ಭಾರತೀಯರು ಸಾವನ್ನಪ್ಪಿದ್ದಾರೆ.

ಕಡಲಾಚೆಯಲ್ಲಿ ಲಂಗರು ಹಾಕಲಾದ ಹಡಗಿಗೆ ಸಿಬ್ಬಂದಿಯನ್ನು ದಿನನಿತ್ಯದಂತೆ ವರ್ಗಾಯಿಸಲಾಗ್ತಿತ್ತು. ಆದ್ರೆ ಏಕಾಏಕಿ ದೋಣಿ ಮಗುಚಿಬಿದ್ದ ಪರಿಣಾಮ ಮೂವರು ಭಾರತೀಯರು ಸಾವನ್ನಪ್ಪಿದ್ದಾರೆ.

ದೋಣಿಯಲ್ಲಿ ಒಟ್ಟು 14 ಮಂದಿ ಭಾರತೀಯರು ಇದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ. ಇತ್ತ 14 ಭಾರತೀಯರ ಪೈಕಿ ಮೂವರು ಸಾವನ್ನಪ್ಪಿದ್ದು, ಐವರು ನಾಪತ್ತೆಯಾಗಿದ್ದಾರೆ. ಸದ್ಯ ಕಾಣೆಯಾದ ಐವರು ಭಾರತೀಯರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಸ್ಥಳೀಯ ಅಧಿಕಾರಿಗಳು, ಕಡಲ ಸಂಸ್ಥೆಗಳು ಮತ್ತು ಭಾರತೀಯ ರಾಯಭಾರ ಕಚೇರಿ ಜಂಟಿಯಾಗಿ ಐವರ ಪತ್ತೆಗೆ ಶೋಧಕಾರ್ಯ ಮುಂದುವರೆಸಿದೆ.

error: Content is protected !!