Monday, October 20, 2025

ಕಾವೇರಿದ ಬಿಹಾರ ವಿಧಾನಸಭಾ ಚುನಾವಣೆ: ಕುತೂಹಲ ಕೆರಳಿಸಿದ ಅಮಿತ್ ಶಾ- ಚಿರಾಗ್ ಪಾಸ್ವಾನ್ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ಪಕ್ಷದ ಚಟುವಟಿಕೆಗಳಿಗೆ ಕಳೆದ ಮೂರು ದಿನಗಳಿಂದ ಪಾಟ್ನಾ ದಲ್ಲಿ ಬೀಡುಬಿಟ್ಟಿರುವ ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಇಂದು ಲೋಕಜನಶಕ್ತಿ ಪಕ್ಷದ ಚಿರಾಗ್ ರಾಜ್ ಪಾಸ್ವಾನ್ ಭೇಟಿ ಮಾಡಿ ಚರ್ಚಿಸಿದರು.

ಅಮಿತ್ ಶಾ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಲಿದ್ದು ಅಭ್ಯರ್ಥಿಗಳ ಗೆಲುವಿಗೆ ಸಲಹೆ- ಸೂಚನೆಗಳನ್ನು ನೀಡಲಿದ್ದಾರೆ. ಬಳಿಕ ಚಿರಾಗ್ ಪಾಸ್ವಾನ್ , ನ.14 ರಂದು ಎನ್ ಡಿಎ ವಿಜಯದೊಂದಿಗೆ ನಾವು ದೀಪಾವಳಿ ಸಂಭ್ರಮಾಚರಣೆ ಮಾಡಲಿದ್ದೇವೆಂದು ಮಾಧ್ಯಮಗಳೊಂದಿಗೆ ಹೇಳಿದರು.

ನಿತೀಶ್ ಕುಮಾರ್ ನಾಯಕತ್ವದಲ್ಲಿ ಎನ್ ಡಿಎ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ . ಮಹಾಘಟಬಂಧನ್ ಗೊಂದಲದಲ್ಲಿದ್ದು ಎನ್ ಡಿಎ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮತ್ತೊಂದೆಡೆ ಮಹಾ ಘಟಬಂಧನ್ ನಲ್ಲಿ ಆರ್ ಜೆಡಿ, ಕಾಂಗ್ರೆಸ್ ಸೇರಿದಂತೆ ಪಕ್ಷಗಳ ಸೀಟು ಹಂಚಿಕೆ ಚರ್ಚೆಯಲ್ಲಿದ್ದು ಯಾವ್ಯಾವ ಪಕ್ಷಕ್ಷಗಳಿಗೆ ಎಷ್ಟೆಷ್ಟು ಸ್ಥಾನ ಹಂಚಿಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ನವೆಂಬರ್ 6ರಂದು ಮೊದಲ ಹಂತದ ಮತದಾನ ನಡೆಯಲಿದೆ. ಒಟ್ಟು 18 ಜಿಲ್ಲೆಗಳ 121 ಕ್ಷೇತ್ರಗಳಿಗೆ ಈ ಹಂತದಲ್ಲಿ ಮತದಾನ ಜರುಗಲಿದೆ.

error: Content is protected !!