Monday, October 20, 2025

ಹಣಕಾಸು | ಎರಡನೇ ತ್ರೈಮಾಸಿಕದಲ್ಲಿ ಜಿಯೋ ಲಾಭ 7,379 ಕೋಟಿಗೆ ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2025-26ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಯೋ 7,379 ಕೋಟಿ ರೂಪಾಯಿಗಳ ಒಟ್ಟು ಲಾಭವನ್ನು ವರದಿ ಮಾಡಿದೆ.

ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದರೆ ಲಾಭದ ಪ್ರಮಾಣ ಶೇ 12.8ರಷ್ಟು ಹೆಚ್ಚಾಗಿದೆ. ಜಿಯೋ ಪ್ಲಾಟ್‌ಫಾರ್ಮ್‌ಗಳ ಇಬಿಐಡಿಟಿಎ ಸಹ ವರ್ಷದಿಂದ ವರ್ಷಕ್ಕೆ ಶೇ 17.7ರಷ್ಟು ಹೆಚ್ಚಾಗಿ, ರೂ. 18,757 ಕೋಟಿಗೆ ತಲುಪಿದೆ. ಈ ತ್ರೈಮಾಸಿಕದಲ್ಲಿ ಜಿಯೋದ ಒಟ್ಟು ಚಂದಾದಾರರ ಸಂಖ್ಯೆ 83 ಲಕ್ಷ ಹೆಚ್ಚಾಗಿದೆ. 2025ರ ಸೆಪ್ಟೆಂಬರ್ ಹೊತ್ತಿಗೆ ಜಿಯೋದ ಒಟ್ಟು ಚಂದಾದಾರರ ಸಂಖ್ಯೆ 5.06 ಕೋಟಿಯನ್ನು ಮೀರಿದೆ. ಭಾರತೀಯ ಟೆಲಿಕಾಂ ಇತಿಹಾಸದಲ್ಲಿಯೇ ಇದು ಮಹತ್ವದ ಸಾಧನೆಯಾಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್‌ನ ಎರಡನೇ ತ್ರೈಮಾಸಿಕ ಫಲಿತಾಂಶಗಳಲ್ಲಿ ಈ ಅಂಕಿ- ಅಂಶ ತಿಳಿದುಬಂದಿದೆ.

ಜಿಯೋ ಟ್ರೂ 5ಜಿ ಚಂದಾದಾರರ ಸಂಖ್ಯೆಯೂ 23.4 ಕೋಟಿಗಿಂತ ಹೆಚ್ಚಾಗಿದೆ. ಈಗ 5ಜಿ ಜಿಯೋದ ಒಟ್ಟು ವೈರ್‌ಲೆಸ್ ದಟ್ಟಣೆಯಲ್ಲಿ ಸುಮಾರು ಶೇ 50ರಷ್ಟಿದೆ. ತ್ರೈಮಾಸಿಕದಲ್ಲಿ ಜಿಯೋ ನೆಟ್‌ವರ್ಕ್ ಒಟ್ಟು 58.4 ಬಿಲಿಯನ್ ಜಿಬಿ ಡೇಟಾ ಟ್ರಾಫಿಕ್ ಅನ್ನು ನಿರ್ವಹಣೆ ಮಾಡಿದ್ದು, ನೆಟ್‌ವರ್ಕ್‌ನಲ್ಲಿ ಧ್ವನಿ ಟ್ರಾಫಿಕ್ 1.5 ಟ್ರಿಲಿಯನ್ ನಿಮಿಷಗಳನ್ನು ತಲುಪಿದೆ.

ಜಿಯೋ 50 ಕೋಟಿ ಗಡಿಯನ್ನು ತಲುಪಿದ ಬಗ್ಗೆ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಮಾತನಾಡಿ,’ಜಿಯೋ ಈಗ 50 ಕೋಟಿಗಿಂತಲೂ ಹೆಚ್ಚು ಗ್ರಾಹಕರನ್ನು ತಲುಪಿದೆ. ಅವರ ದೈನಂದಿನ ಜೀವನದಲ್ಲಿ ಸಹಾಯ ಮಾಡಲು ಡಿಜಿಟಲ್ ಸೇವೆಗಳನ್ನು ಒದಗಿಸುತ್ತಿದೆ. ಭಾರತದಲ್ಲಿ ತಾಂತ್ರಿಕ ಕ್ರಾಂತಿಯನ್ನು ವೇಗಗೊಳಿಸಿದ ಮತ್ತು ನಮ್ಮ ಪ್ರಧಾನ ಮಂತ್ರಿಯವರ ‘ಡಿಜಿಟಲ್ ಇಂಡಿಯಾ ಮಿಷನ್’ನ ಬೆನ್ನೆಲುಬಾಗಿ ಮಾರ್ಪಟ್ಟಿರುವ ಜಿಯೋದ ಡೀಪ್-ಟೆಕ್ ಉಪಕ್ರಮಗಳಿಂದ ಇದು ಸಾಧ್ಯವಾಗಿದೆ. ಜಿಯೋ ಹೊಸ ಯುಗದ ತಂತ್ರಜ್ಞಾನಗಳನ್ನು ತರುವುದನ್ನು ಮತ್ತು ಪ್ರತಿ ಭಾರತೀಯ ನಾಗರಿಕನ ಜೀವನವನ್ನು ಸುಧಾರಿಸುವುದನ್ನು ಮುಂದುವರಿಸುತ್ತದೆ. ಮೇಡ್ ಇನ್ ಇಂಡಿಯಾ ತಂತ್ರಜ್ಞಾನವನ್ನು ಜಿಯೋ ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗಿ ಜಾರಿಗೆ ತಂದಿದೆ ಮತ್ತು ಈಗ ಈ ತಂತ್ರಜ್ಞಾನವನ್ನು ಜಾಗತಿಕವಾಗಿ ತೆಗೆದುಕೊಂಡು ಹೋಗಲು ತಯಾರಿ ನಡೆಸುತ್ತಿದೆ’ಎಂದರು.

ಕಂಪನಿಯ ಪ್ರಕಾರ, ಜಿಯೋದ ಸ್ಥಿರ ಬ್ರಾಡ್‌ಬ್ಯಾಂಡ್ ಸೇವೆಯು ಈ ತ್ರೈಮಾಸಿಕದಲ್ಲಿ ಪ್ರತಿ ತಿಂಗಳು 10 ಮನೆಗಳನ್ನು ಸೇರ್ಪಡೆ ಮಾಡಿದೆ. ಇದರೊಂದಿಗೆ, ಜಿಯೋ ಈಗ ಒಟ್ಟು 2.3 ಕೋಟಿ ಸ್ಥಳಗಳನ್ನು ಸಂಪರ್ಕಿಸಿದೆ. ಜಿಯೋ ಏರ್‌ಫೈಬರ್ ವಿಶ್ವದ ಮುಂಚೂಣಿಯಲ್ಲಿದ್ದು, ಚಂದಾದಾರರ ಸಂಖ್ಯೆ 95 ಲಕ್ಷಕ್ಕೆ ಬೆಳೆಯುತ್ತಿದೆ.

error: Content is protected !!