ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುತ್ತಿಗೆದಾರರ ಸಂಘದ ತೀವ್ರ ಒತ್ತಡ ರಾಜ್ಯ ಸರಕಾರ ಮಣಿದಿದ್ದು, ಬಿಬಿಎಂಪಿಯಲ್ಲಿ ಇಟ್ಟಿರುವ 10% FDR ವಾಪಸ್ಸು ಕೊಡಲು ಒಪ್ಪಿಗೆ ಸೂಚಿಸಿದೆ.
ಕಂಟ್ರಾಕ್ಟರ್ ಅಸೋಸಿಯೇಷನ್ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಸರ್ಕಾರಿ ನಿವಾಸದಲ್ಲಿ ಸಭೆ ನಡೆಸಿದರು. ಈ ವೇಳೆ ಡಿಸೆಂಬರ್ ಒಳಗೆ ಬಿಬಿಎಂಪಿ ವ್ಯಾಪ್ತಿಯ ಕಂಟ್ರಾಕ್ಟರ್ FDR ವಾಪಸ್ಸು ಮಾಡುವ ಬಗ್ಗೆ ಭರವಸೆ ಮಾಡಿದ್ದಾರೆ.
ಈ ಹಿಂದೆ ಬಾಕಿ ಹಣ ಪಾವತಿಸುವಂತೆ ಸರ್ಕಾರವನ್ನ ಸಾಕಷ್ಟು ಬಾರಿ ಕಂಟ್ರಾಕ್ಟರ್ ಅಸೋಸಿಯೇಷನ್ ಒತ್ತಾಯಿಸಿತ್ತು. ವಿವಿಧ ಸಮಸ್ಯೆಗಳನ್ನ ಮುಂದಿಟ್ಟು ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರಿಗೂ ಪತ್ರ ಅಸೋಸಿಯೇಷನ್ ಬರೆದಿತ್ತು. ಆದ್ರು ಕಂಟ್ರಾಕ್ಟರ್ ಅಸೋಸಿಯೇಷನ್ ಬೇಡಿಕೆಯನ್ನು ಸರ್ಕಾರ ಈಡೇರಿಸಿರಲಿಲ್ಲ. ಇದ್ರ ಬೆನ್ನಲ್ಲೇ ಸರ್ಕಾರದ ವಿರುದ್ದ ಕಂಟ್ರಾಕ್ಟರ್ ಅಸೋಸಿಯೇಷನ್ಆಕ್ರೋಶ ವ್ಯಕ್ತಪಡಿಸಿತ್ತು.
ಇದೀಗ ಸಭೆ ಬಳಿಕ ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ್ ಹೇಳಿಕೆ ನೀಡಿ, ಡಿಸೆಂಬರ್ ತಿಂಗಳೊಳಗೆ ಬಾಕಿ ಹಣ ಬಿಡುಗಡೆ ಮಾಡುವ ಭರವಸೆ ಸಿಕ್ಕಿದೆ. ಇನ್ನೆರಡು ದಿನದಲ್ಲಿ ಸಿಎಂ ಜೊತೆ ಸಭೆ ಮಾಡುತ್ತೇನೆ ಎಂದಿದ್ದಾರೆ.
ನಾವು ಕಮೀಷನ್ ಬಗ್ಗೆ ಮಾತನಾಡಿಲ್ಲ. 80% ಕಮೀಷನ್ ಇದೆ ಅಂತ ಹೇಳುತ್ತಿದ್ದಾರೆ ಅಂತ ಡಿಸಿಎಂ ಕೇಳಿದ್ರು. ರಾಜಕೀಯ ಪ್ರೇರಿತ ನಮಗೂ ಅದಕ್ಕೂ ಸಂಬಂಧವಿಲ್ಲ ಅಂತ ಹೇಳಿದ್ದೇವೆ. ಕೋರ್ಟ್ ಗೆ ಹೋಗಿ ಅಂತ ಸಿಎಂ ಹೇಳಿದ್ದಾರೆ. ನಾವು ಕೋರ್ಟಿಗೂ ಹೋಗಲ್ಲ ಎಲ್ಲಿಗೂ ಹೋಗಲ್ಲ ನಾವು ಇಲ್ಲಿಯೇ ಹೋರಾಟ ಮಾಡುತ್ತೇವೆ. ರಾಜ್ಯಪಾಲರು ಮತ್ತು ಹೈಕಮಾಂಡ್ ನ್ನ ಭೇಟಿ ಮಾಡುತ್ತೇವೆ. ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ 50 ಲಕ್ಷದ ಪೇಮೆಂಟ್ ನೀಡುತ್ತೇನೆ ಎಂದಿದ್ದಾರೆ. 33 ಸಾವಿರ ಕೋಟಿ ಕೊಡಲಿಲ್ಲ ಅಂದ್ರೆ ಹೋರಾಟ ಮಾಡುವುದಾಗಿ ಡಿಸಿಎಂಗೆ ತಿಳಿಸಿದ್ದೇವೆ. ಜನವರಿಯಲ್ಲಿ ಬಾಕಿ ಹಣ ಬಿಡುಗಡೆ ಮಾಡುತ್ತೇವೆ ಅಂತ ಡಿಸಿಎಂ ಹೇಳಿದ್ರು. ನಾವು ಡಿಸೆಂಬರ್ ಗೆ ಬಿಡುಗಡೆ ಮಾಡಿ ಅಂತ ಕೇಳಿದ್ವೀ ಒಪ್ಪಿದ್ದಾರೆ. ನೀರಾವರಿಯ 4 ನಿಗಮಗಳಿಗೆ ಸಂಬಂಧಪಟ್ಟ ಬಾಕಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.