Monday, October 20, 2025

ರಾಷ್ಟ್ರ ರಾಜಧಾನಿಯಲ್ಲಿ ದೀಪಾವಳಿ ಸಂಭ್ರಮ: ಕರ್ತವ್ಯ ಪಥದಲ್ಲಿ ಬೆಳಗಿದ ಒಂದೂವರೆ ಲಕ್ಷ ಹಣತೆಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೀಪಾವಳಿಗೆ ದಿನಗಣನೆ ಆರಂಭವಾಗಿದ್ದು, ದೇಶದಲ್ಲೆಡೆ ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಇತ್ತ ದೆಹಲಿಯಲ್ಲಿ ಮೊದಲ ಬಾರಿಗೆ ಅದ್ದೂರಿಯಾಗಿ ದೀಪೋತ್ಸವದ ಮೂಲಕ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಬಹಳ ಕಾಲದ ಬಳಿಕ ದೆಹಲಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ ಮಾದರಿಯಲ್ಲೇ ಇಂದು 1.5 ಲಕ್ಷ ಹಣತೆಗಳನ್ನು ದೆಹಲಿಯ ಕರ್ತವ್ಯ ಪಥದ ಉದ್ದಕ್ಕೂ ಬೆಳಗಿಸುವ ಮೂಲಕ ದೀಪೋತ್ಸವ ಆಚರಿಸಲಾಯಿತು.

ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಕರ್ತವ್ಯ ಪಥದಲ್ಲಿ ನಗರದ ಮೊದಲ “ದೀಪೋತ್ಸವ” ಆಚರಣೆಯನ್ನು ಉದ್ಘಾಟಿಸಿದರು. ಇದರಲ್ಲಿ ಭಾಗವಹಿಸಿದ್ದ ಜನರು 1.51 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಿದರು. ಇದರೊಂದಿಗೆ ಸಾಂಸ್ಕೃತಿಕ ಪ್ರದರ್ಶನಗಳು, ರಾಮ ಕಥೆಯ ಕಥೆ ಹೇಳುವ ಅವಧಿಗಳು ಮತ್ತು ರಾತ್ರಿ ಆಕಾಶವನ್ನು ಬೆಳಗಿಸುವ ಆಕರ್ಷಕ ಡ್ರೋನ್ ಪ್ರದರ್ಶನವೂ ನಡೆಯಿತು.

error: Content is protected !!