ಮಂಗಳೂರು ಕರಾವಳಿಯ ಆಹಾರ ಎಂದರೆ ಮಸಾಲೆಯ ರುಚಿ, ಸಮುದ್ರದ ಸುವಾಸನೆ ಮತ್ತು ಬಿಸಿ ಬಿಸಿ ತವಾ ಫ್ರೈ! ಕರಾವಳಿ ಮನೆಗಳಲ್ಲಿ ಮಸಾಲೆಯ ಸುವಾಸನೆ ಹರಡುವ ಸಮಯದಲ್ಲಿ ಬಾಯಲ್ಲಿ ನೀರೂರದವರು ಇದ್ದಾರಾ?. ಸಾಧ್ಯನೇ ಇಲ್ಲ.. ಸೋ ಇವತ್ತು ಮಂಗಳೂರು ಸ್ಟೈಲ್ ತವಾ ಫ್ರೈ ಮಾಡೋದು ಹೇಗೆ ನೋಡೋಣ.
ಬೇಕಾಗುವ ಸಾಮಗ್ರಿಗಳು:
ತಾಜಾ ಮೀನು – 4 ತುಂಡುಗಳು
ಕೆಂಪು ಮೆಣಸಿನ ಪುಡಿ – 1½ ಚಮಚ
ಅರಿಶಿನ ಪುಡಿ – ½ ಚಮಚ
ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ನಿಂಬೆ ರಸ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಬೇಯಿಸಲು ಅಗತ್ಯವಷ್ಟು
ತಯಾರಿಸುವ ವಿಧಾನ:
ಮೊದಲಿಗೆ ಮೀನು ತುಂಡುಗಳನ್ನು ಸ್ವಚ್ಛವಾಗಿ ತೊಳೆದು ಒಣಗಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ಮೆಣಸಿನ ಪುಡಿ, ಅರಿಶಿನ ಪುಡಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ ಮತ್ತು ಉಪ್ಪು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ.
ನಂತರ ಮೀನಿನ ಮೇಲೆ ಸೀಳು ಹಾಕಿ, ತಯಾರಿಸಿದ ಮಸಾಲೆಯನ್ನು ಎರಡೂ ಬದಿಯ ಮೇಲೂ ಚೆನ್ನಾಗಿ ಹಚ್ಚಿ 20 ನಿಮಿಷಗಳ ಕಾಲ ಮ್ಯಾರಿನೇಟ್ ಆಗಲು ಬಿಡಿ.
ತವಾ ಅಥವಾ ಪ್ಯಾನ್ ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ. ಮೀನನ್ನು ನಿಧಾನ ಉರಿಯಲ್ಲಿ ಬೇಯಿಸಿ, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ತಿರುಗಿಸುತ್ತಾ ಬೇಯಿಸಿ. ಎರಡೂ ಬದಿಯೂ ಬೆಂದ ನಂತರ ತಟ್ಟೆಗೆ ತೆಗೆದು ಬಿಸಿ ಬಿಸಿ ಸರ್ವ್ ಮಾಡಿ.