ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ನೌಕರರು ತಮ್ಮ ಹೆತ್ತವರನ್ನು ನಿರ್ಲಕ್ಷಿಸಿದ್ರೆ ಅವರ ಸಂಬಳದ ಶೇಕಡಾ 10 ರಿಂದ 15 ರಷ್ಟು ಕಡಿತಗೊಳಿಸಿ ಅದನ್ನು ಪೋಷಕರಿಗೆ ನೀಡುವ ಮಸೂದೆಯನ್ನು ಜಾರಿಗೆ ತರುವ ಯೋಜನೆ ಇದೆ ಎಂದು ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ತಿಳಿಸಿದ್ದಾರೆ.
ಹೊಸದಾಗಿ ಆಯ್ಕೆಯಾದ ಗ್ರೂಪ್-II ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸುವ ಮೊದಲು ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರು ತಮ್ಮ ಪೋಷಕರನ್ನು ನಿರ್ಲಕ್ಷಿಸಿದರೆ, ಅವರ ಸಂಬಳದ ಶೇಕಡಾ 10 ರಿಂದ 15 ರಷ್ಟು ಹಣವನ್ನು ಕಡಿತಗೊಳಿಸಿ ಪೋಷಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ನೀವು ಶಾಸನವನ್ನು ರಚಿಸುವವರು. ನೀವು ಮಾಸಿಕ ಸಂಬಳವನ್ನು ಪಡೆಯುವಂತೆಯೇ, ನಿಮ್ಮ ಪೋಷಕರು ಸಹ ಅದರಿಂದ ಆದಾಯವನ್ನು ಪಡೆಯುವುದನ್ನು ನಾವು ನೋಡಿಕೊಳ್ಳುತ್ತೇವೆ ಎಂದರು.