ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಹೆಮ್ಮೆಯ ನಟ-ನಿರ್ದೇಶಕ ರಿಷಬ್ ಶೆಟ್ಟಿ ‘ಕಾಂತಾರ ಚಾಪ್ಟರ್ 1’ ಚಿತ್ರದ ಅದ್ಭುತ ಯಶಸ್ಸಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಜಗತ್ತಿನಾದ್ಯಾಂತ ಭರ್ಜರಿ ಪ್ರದರ್ಶನ ಕಂಡಿರುವ ಬೆನ್ನಲ್ಲೇ, ರಿಷಬ್ ಶೆಟ್ಟಿ ಹಾಸನಾಂಬೆ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದಿದ್ದಾರೆ.
ರಿಷಬ್ ಶೆಟ್ಟಿ ಇತ್ತೀಚೆಗಷ್ಟೇ ಮೈಸೂರಿನ ಚಾಮುಂಡೇಶ್ವರಿ, ಬಿಹಾರದ ಮುಂಡೇಶ್ವರಿ, ಕಾಶಿ ವಿಶ್ವನಾಥ, ರಾಮೇಶ್ವರ ಸೇರಿದಂತೆ ದೇಶದ ಹಲವು ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುತ್ತಾ ಬಂದಿದ್ದಾರೆ.
‘ಕಾಂತಾರ 1’ ಸಿನಿಮಾದ ಜಾಗತಿಕ ಕಲೆಕ್ಷನ್ ಈಗಾಗಲೇ 717.50 ಕೋಟಿ ರೂ. ಗಳಿಸಿದೆ. ಬಿಡುಗಡೆಯಾಗಿ ಕೇವಲ 15 ದಿನಗಳಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಈ ರೀತಿಯ ಆದಾಯ ಮುಂದುವರೆದರೆ, ಚಿತ್ರವು ‘ಕೆಜಿಎಫ್ 2’ ಸಿನಿಮಾದ ಗಳಿಕೆಯನ್ನು ಮೀರಿ ಈ ವರ್ಷದ ಅತೀ ದೊಡ್ಡ ಕನ್ನಡ ಚಿತ್ರವಾಗಿ ಹೊರಹೊಮ್ಮುವ ಸಾಧ್ಯತೆ ಇದೆ.