ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣ್ಬೀರ್ ಕಪೂರ್, ಸಲ್ಮಾನ್ ಖಾನ್, ಕಾರ್ತಿಕ್ ಆರ್ಯನ್ ಅಂಥ ಸ್ಟಾರ್ ಗಳ ಜೊತೆ ಕೆಲಸ ಮಾಡಿ, ತಮ್ಮ ಪ್ರತಿಭೆ ಮತ್ತು ಗ್ಲಾಮರ್ ಮೂಲಕ ಗಮನ ಸೆಳೆದ ನಟಿ ರಶ್ಮಿಕಾ ಮಂದಣ್ಣ ಈಗ ಹೊಸ ಹಾರರ್ ಸಿನಿಮಾ ‘ಥಮಾ’ ಮೂಲಕ ಬಾಲಿವುಡ್ನಲ್ಲಿ ಪ್ರೇಕ್ಷಕರ ಮುಂದೆ ಮತ್ತಷ್ಟು ಹಾಟ್ ಅವತಾರ ಬರಲು ಸಜ್ಜಾಗಿದ್ದಾರೆ.
ಸಿಬಿಎಫ್ಸಿ (CBFC)ಯಿಂದ ಯು/ಎ ಪ್ರಮಾಣ ಪತ್ರ ಪಡೆದ ‘ಥಮಾ’ ಸಿನಿಮಾದಲ್ಲಿ ರಶ್ಮಿಕಾ ದೆವ್ವದ ಪಾತ್ರದಲ್ಲಿ ನಟಿಸಿದ್ದಾರೆ. ಐಟಂ ಸಾಂಗ್ ಗಳಲ್ಲಿ ಮಾದಕವಾಗಿ ಹೆಜ್ಜೆ ಹಾಕಿ, ನಾಯಕ ಆಯುಷ್ಮಾನ್ ಖುರಾನಾ ಜೊತೆಗೆ ಕೆಲವು ಶೃಂಗಾರ ದೃಶ್ಯಗಳಲ್ಲಿ ಭಾಗಿಯಾಗಿದ್ದಾರೆ. ಆದರೆ ಸಿಬಿಎಫ್ಸಿ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದು ಮುಖ್ಯವಾಗಿ ಕಿಸ್ಸಿಂಗ್ ದೃಶ್ಯಗಳ ಅವಧಿಯನ್ನು ಕಡಿಮೆ ಮಾಡಿ ಐದು ಸೆಕೆಂಡುಗಳಷ್ಟೇ ಉಳಿಸಲಾಗಿದೆ. ಗ್ಲಾಮರ್ ದೃಶ್ಯಗಳ ಕೆಲವು ಭಾಗಗಳಿಗೂ ಕತ್ತರಿ ಪ್ರಯೋಗಿಸಲಾಗಿದೆ.
ಹೀಗೆಯೇ ‘ಆಜಾದಿ’, ‘ಅಲೆಕ್ಸಾಂಡರ್’ ಮತ್ತು ‘ಅಶ್ವತ್ಥಾಮ’ ಪದಗಳನ್ನೂ ಚಿತ್ರತಂಡ ತಿದ್ದುಪಡಿ ಮಾಡಿದ್ದು, ಚಿತ್ರದ ಕೆಲ ಶಬ್ದಗಳು ಮತ್ತು ಸಂಭಾಷಣೆಗಳನ್ನು ಮ್ಯೂಟ್ ಮಾಡಲಾಗಿದೆ. ಮ್ಯಾಡ್ಲಾಕ್ ಸ್ಟುಡಿಯೋಸ್ ನಿರ್ಮಾಣದ ಚಿತ್ರವನ್ನು ಆದಿತ್ಯ ಸರ್ಪೋಟ್ಧಾರ್ ನಿರ್ದೇಶಿಸಿದ್ದಾರೆ. ‘ಥಮಾ’ ಸಿನಿಮಾ ಅಕ್ಟೋಬರ್ 21 ರಂದು ತೆರೆಗೆ ಬರಲಿದೆ.