Monday, October 20, 2025

ಮಾದಕ ವಸ್ತುಗಳು ಹೊತ್ತು ಅಮೆರಿಕದತ್ತ ಪ್ರಯಾಣಿಸುತ್ತಿದ್ದ ಸಬ್​ಮರೀನ್ ಮೇಲೆ ದಾಳಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೃಹತ್​ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ಹೊತ್ತು ಅಮೆರಿಕಾದತ್ತ ಪ್ರಯಾಣಿಸುತ್ತಿದ್ದ ಸಬ್ಮೆರಿನ್ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಹತರಾಗಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ.

ಈ ನೌಕೆಯು ಫೆಂಟನೈಲ್ ಹಾಗೂ ಇತರ ಮಾದಕ ವಸ್ತುಗಳನ್ನು ಸಾಗಿಸುತ್ತಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು ಎಂದು ಟ್ರಂಪ್ ತಿಳಿಸಿದ್ದಾರೆ.

ಮಾದಕ ವಸ್ತುಗಳನ್ನು ತುಂಬಿಕೊಂಡು ಅಮೆರಿಕದತ್ತ ಬರುತ್ತಿದ್ದ ಬೃಹತ್ ನೌಕೆಯನ್ನು ನಾಶಪಡಿಸಿರುವುದು ನನಗೆ ಗೌರವದ ವಿಷಯ. ಘಟನೆಯಲ್ಲಿ ಬದುಕುಳಿದ ಇಬ್ಬರು ಭಯೋತ್ಪಾದಕರ ಬಂಧನ ಮತ್ತ ವಿಚಾರಣೆಗಾಗಿ ಅವರ ಮೂಲದೇಶಗಾಳದ ಎಕ್ವೆಡಾರ್(Ecuador) ಮತ್ತು ಕೊಲಂಬಿಯಾ‌(Colombia)ಗೆ ರವಾನಿಸಲಾಗಿದೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಟ್ರಂಪ್ ಬರೆದುಕೊಂಡಿದ್ದಾರೆ.

ಈ ಸಬ್ಮೆರಿನ್ ದೇಶದ ತೀರಕ್ಕೆ ತಲುಪಿದ್ದರೆ ಕನಿಷ್ಠ 25,000 ಅಮೆರಿಕನ್‌ ಜನರು ಸಾವಿಗೀಡಾಗುತ್ತಿದ್ದರು. ಈ ದಾಳಿಯಲ್ಲಿ ಯಾವುದೇ ಅಮೆರಿಕದ ಪಡೆಗಳಿಗೆ ಹಾನಿಯಾಗಿಲ್ಲ. ನಾನು ಅಧಿಕಾರದಲ್ಲಿರುವವರೆಗೆ ಜಲಮಾರ್ಗ ಅಥವಾ ಭೂಮಾರ್ಗಗಳ ಮೂಲಕ ಅಕ್ರಮ ಮಾದಕ ವಸ್ತು ಸಾಗಾಣೆಗೆ ಅಮೆರಿಕ ಬಿಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಈ ದಾಳಿ ಟ್ರಂಪ್ ಅವರ ಲ್ಯಾಟಿನ್ ಅಮೆರಿಕದಿಂದ ಯುನೈಟೆಡ್ ಸ್ಟೇಟ್ಸ್‌ನತ್ತ ಡ್ರಗ್ ಸಾಗಣೆ ತಡೆಯುವ ಕಠಿಣ ನೀತಿಯ ಭಾಗವಾಗಿದೆ. ಸೆಪ್ಟೆಂಬರ್‌ನಿಂದ ಇಂದಿನವರೆಗೆ, ಕ್ಯಾರಿಬಿಯನ್‌ನಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಕನಿಷ್ಠ 6 ನೌಕೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ದಾಳಿ ನಡೆಸಿದೆ.

ಅಮೆರಿಕ ಇಲ್ಲಿಯವರೆಗೆ 27 ಮಾದಕ ವಸ್ತು ಸಾಗಾಣೆದಾರರನ್ನು ಕೊಂದಿರುವುದಾಗಿ ಹೇಳಿದೆ. ಆದರೆ, ಯಾವುದೇ ಇದಕ್ಕೆ ಸಂಬಂಧಿಸಿದಂತೆ ಪುರಾವೆಗಳನ್ನು ನೀಡಿಲ್ಲ. ಕಳೆದ ಮಂಗಳವಾರವಷ್ಟೇ, ವೆನೆಜುವೆಲಾ ತೀರದ ಸಮುದ್ರದಲ್ಲಿ ಮಾದಕ ವಸ್ತು ಸಾಗಿಸುತ್ತಿತ್ತು ಎಂಬ ಆರೋಪದ ಮೇಲೆ ಅಮೆರಿಕ ಪುಟ್ಟ ನೌಕೆಯೊಂದರ ಮೇಲೆ ದಾಳಿ ನಡೆಸಿ, 6 ಜನರನ್ನು ಹತ್ಯೆ ಮಾಡಿತ್ತು. ಆದರೆ, ಅಮೆರಿಕದ ಈ ಕ್ರಮಕ್ಕೆ ಪರಿಣಿತರು ವಿರೋಧ ವ್ಯಕ್ತಪಡಿಸಿದ್ದು, ಅಪರಾಧದ ಬಗ್ಗೆ ಖಚಿತಪಡಿಸಿಕೊಳ್ಳದೇ ಈ ರೀತಿ ಹತ್ಯೆ ಮಾಡುವುದು ಕಾನೂನಿನ ಉಲ್ಲಂಘನೆ ಎಂದು ಹೇಳಿದ್ದಾರೆ.

error: Content is protected !!