Thursday, September 25, 2025

ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ ಜಾಹೀರಾತು ಪ್ರಕರಣ: ED ವಿಚಾರಣೆಗೆ ನಟ ಪ್ರಕಾಶ್ ರಾಜ್ ಹಾಜರು

ಹೊಸ ದಿಗಂತ ಡಿಜಿಟಲ್ ಡೆಸ್ಕ್;

ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನು ಜಾಹೀರಾತು ಮಾಡಿದ ಪ್ರಕರಣದಲ್ಲಿ ಸಿಲುಕಿರುವ ವಿಜಯ್ ದೇವರಕೊಂಡ, ರಾಣಾ, ಪ್ರಕಾಶ್ ರಾಜ್, ಮಂಜು ಲಕ್ಷ್ಮಿ ಮುಂತಾದವರಿಗೆ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ED ಸೂಚಿಸಲಾಗಿತ್ತು

ಅದರಂತೆ ಮೊದಲು ರಾಣಾ ಜುಲೈ 23 ರಂದು ED ವಿಚಾರಣೆಗೆ ಹಾಜರಾದರು. ನಂತರ ಜುಲೈ 30 ರಂದು ಪ್ರಕಾಶ್ ರಾಜ್ ಹಾಜರಾಗಬೇಕೆಂದು ED ಸೂಚಿಸಿತ್ತು.

ಇಂದು ನಟ ಪ್ರಕಾಶ್ ರಾಜ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ED ವಿಚಾರಣೆಗೆ ಹಾಜರಾದರು. ಅವರನ್ನು ED ಅಧಿಕಾರಿಗಳು ವಿಚಾರಿಸಿದ್ದಾರೆ.

ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಜಾಹೀರಾತು ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿರುವವರಲ್ಲಿ ನಿಧಿ ಅಗರ್ವಾಲ್, ಶ್ರೀಮುಖಿ, ಶ್ಯಾಮಲ, ಪ್ರಣಿತಾ, ರೀತು ಸೌತ್ರಿ, ಅನನ್ಯ ನಾಗಲ್ಲ, ವಿಷ್ಣು ಪ್ರಿಯಾ, ಚಿರು ಹನುಮಂತ, ವರ್ಷಿಣಿ, ವಸಂತ್ ಕೃಷ್ಣ, ಟೇಸ್ಟಿ ತೇಜ್ ಮುಂತಾದವರು ಸೇರಿದ್ದಾರೆ. ಪ್ರಭಾವಿ ವ್ಯಕ್ತಿಗಳಲ್ಲಿ ಹರ್ಷ ಸಾಯಿ, ಪಾಯ ಸನ್ನಿ ಯಾದವ್, ಲೋಕಲ್ ಬಾಯ್ ನಾನಿ ಮುಂತಾದವರು ಸೇರಿದ್ದಾರೆ. ಇವರ ವಿಚಾರಣೆ ಯಾವಾಗ ನಡೆಯಲಿದೆ ಎಂಬುದು ತಿಳಿದಿಲ್ಲ.

ಇದನ್ನೂ ಓದಿ