ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ , ಚಂದ್ರಯಾನ-2 ಮೂಲಕ ಸೂರ್ಯನಿಂದ ಚಂದ್ರನ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಮೊದಲ ವೀಕ್ಷಣೆಯನ್ನು ಮಾಡಿದೆ.
ಈ ಬಗ್ಗೆ ಇಸ್ರೋ ಅಧಿಕೃತ ಪ್ರಕಟಣೆ ನೀಡಿದೆ. ಚಂದ್ರನ ಬಾಹ್ಯಗೋಳ ತೆಳುವಾದ ವಾತಾವರಣ ಹಾಗೂ ಚಂದ್ರನ ಮೇಲ್ಮೈ ಮೇಲೆ ಬಾಹ್ಯಾಕಾಶದ ಹವಾಮಾನದ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಈ ಅಧ್ಯಯನವು ಸಹಾಯ ಮಾಡುತ್ತವೆ. 2019ರ ಜುಲೈ 22ರಂದು ಉಡಾವಣೆಗೊಂಡ ಚಂದ್ರಯಾನ-2 ಉಪಗ್ರಹದಲ್ಲಿ 8 ಪ್ರಾಯೋಗಿಕ ಪೆಲೋಡ್ ಗಳನ್ನು ಅಳವಡಿಸಲಾಗಿತ್ತು. 2019ರ ಆ.20ರಂದು ಚಂದ್ರಯಾನ -2 ಚಂದ್ರನ ಸುತ್ತಲಿನ ದೀರ್ಘವೃತ್ತದ ಕಕ್ಷೆಗೆ ಸೇರ್ಪಡೆಗೊಂಡಿತ್ತು. 2019ರ ಸೆಪ್ಟೆಂಬರ್ 7ರಂದು ವಿಕ್ರಮ್ ಲ್ಯಾಂಡರ್ ನೊಂದಿಗಿನ ಸಂಪರ್ಕವು ನಷ್ಟವಾಗಿದ್ದರೂ, ಆರ್ಬಿಟರ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗಲೂ ಚಂದ್ರನ ಸುತ್ತಲೂ 100 X100 ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಚಂದ್ರನ-2ನಲ್ಲಿರುವ ಪೇಲೋಡ್ ಗಳಲ್ಲಿ ಒಂದಾದ ಎಕ್ಸ್ ಪ್ಲೋರರ್ -2 ಸೂರ್ಯನಿಂದ ಹೊರಸೂಸುವ ಕರೋನಲ್ ದ್ರವ್ಯರಾಶಿಯ ಪರಿಣಾಮಗಳನ್ನು ಇದೀಗ ದಾಖಲಿಸಿದೆ. 2024ರ ಮೇ 10ರಂದು ಸಂಭವಿಸಿದ ಅಪರೂಪದ ಸೌರಘಟನೆಯ ಸಂದರ್ಭದಲ್ಲೂ ಕರೋನಾಲ್ ಮಾಸ್ ಎಜೆಕ್ಷನ್ ಗಳು ಚಂದ್ರನ ಮೇಲೆ ಬೀರಿರುವ ಪರಿಣಾಮವನ್ನು ಚಂದ್ರಯಾನ-2 ಅಧ್ಯಯನ ಮಾಡಿದೆ. ಇದರಿಂದ ಚಂದ್ರನ ಬಾಹ್ಯಾಗೋಳದಲ್ಲಿ ಹಗಲಿನಲ್ಲಿ ಒತ್ತಡದ ಪ್ರಮಾಣ ಹೆಚ್ಚಳವಾಗಿರುವುದಕ್ಕೆ ಕಾರಣವಾಗಿದೆ. ಬಾಹ್ಯಾಗೋಳದಲ್ಲಿ ತಟಸ್ಥ ಪರಮಾಣುಗಳು ಮತ್ತು ಅಣುಗಳ ಸಂಖ್ಯೆಯು ಹೆಚ್ಚಳವಾಗಿದೆ ಎಂದು ಇಸ್ರೋದ ಬಾಹ್ಯಾಕಾಶ ವಿಜ್ಞಾನಿಗಳು ವಿಶ್ಲೇಷಣೆ ಮಾಡಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋದಿಂದ ಮತ್ತೊಂದು ಮೈಲುಗಲ್ಲು ಸ್ಥಾಪನೆ: ಈಗ ಸೂರ್ಯನಿಂದ ಚಂದ್ರನ ಮೇಲಿನ ಪರಿಣಾಮಗಳ ವೀಕ್ಷಣೆ!
