Monday, October 20, 2025

ರಾಘವ್ ಚಡ್ಡಾ ಮನೆಯಲ್ಲಿ ದೀಪಾವಳಿ ಡಬಲ್ ಸಂಭ್ರಮ: ಗಂಡು ಮಗುವಿಗೆ ಜನ್ಮ ನೀಡಿದ ಪರಿಣಿತಿ ಚೋಪ್ರಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಗುಡ್‌ನ್ಯೂಸ್‌ ಹಂಚಿಕೊಂಡಿದ್ದಾರೆ. ಪರಿಣಿತಿ ಚೋಪ್ರಾ – ರಾಜಕಾರಣಿ ರಾಘವ್ ಚಡ್ಡಾ ದಂಪತಿಗೆ ಗಂಡು ಮಗು ಜನಿಸಿದೆ.

ಮೊದಲ ಮಗುವನ್ನು ಸ್ವಾಗತಿಸಿರುವ ವಿಚಾರವನ್ನು ದಂಪತಿ ಶೇರ್‌ ಮಾಡಿದ್ದಾರೆ. ಸದ್ಯ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ದಂಪತಿಗೆ ಶುಭಾಶಯ ತಿಳಿಸುತ್ತಿದ್ದಾರೆ.

2023ರ ಸೆಪ್ಟೆಂಬರ್ 24ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು. ಇದೀಗ ಮದುವೆಯಾದ 2 ವರ್ಷಗಳೊಳಗೆ ದಂಪತಿ ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ದಂಪತಿ, ʼʼಅವನು ಕೊನೆಗೂ ಬಂದಿದ್ದಾನೆ. ನಮ್ಮ ಮುದ್ದಾದ ಮಗ…ಅವನಿಲ್ಲದ ಜೀವನವನ್ನು ನಾವು ನೆನಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ತೋಳುಗಳು ತುಂಬಿಕೊಂಡಿವೆ, ಹೃದಯಗಳು ಇನ್ನಷ್ಟು ಸಂತೋಷದಲ್ಲಿ ತುಂಬಿವೆ…ಮೊದಲು ನಮಗೆ ನಾವಿದ್ದೆವು…ಈಗ ನಮ್ಮ ಬಳಿ ಎಲ್ಲವೂ ಇದೆʼʼ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

error: Content is protected !!