Monday, October 20, 2025

ರಾಮನೂರಿನಲ್ಲಿ ಮೇಳೈಸಿದ ದೀಪೋತ್ಸವ: 26 ಲಕ್ಷ ದೀಪಗಳಿಂದ ಕಂಗೊಳಿಸಿದ ಅಯೋಧ್ಯೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೀಪಾವಳಿ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಭಾನುವಾರ (ಅಕ್ಟೋಬರ್‌ 19) ಅಯೋಧ್ಯೆಯಲ್ಲಿ ದೀಪೋತ್ಸವ ಆಯೋಜಿಸಲಾಗಿದೆ. ರಾತ್ರಿಯಾಗುತ್ತಿದ್ದಂತೆ ಸರಯೂ ನದಿ ದಡದಲ್ಲಿ ಲಕ್ಷ ಲಕ್ಷ ಹಣತೆ ಬೆಳಗಿತು. ಈ ಮೂಲಕ ಎರಡು ಗಿನ್ನೆಸ್ ದಾಖಲೆ ನಿರ್ಮಾಣಗೊಂಡಿವೆ. ಅಯೋಧ್ಯೆಯ 56 ಘಾಟ್​ಗಳ ಸಾಲುಗಳುದ್ದಕ್ಕೂ ಅತಿಹೆಚ್ಚು ದೀಪಗಳನ್ನು ಹಚ್ಚಿದ್ದು, ಹಾಗೂ ಅತಿ ಹೆಚ್ಚು ಜನರು ಒಟ್ಟಿಗೆ ದೀಪಾರತಿ ಮಾಡಿದ್ದು, ಈ ಎರಡು ವಿಶ್ವ ದಾಖಲೆಗಳು ಸ್ಥಾಪನೆಯಾಗಿವೆ. ಗಿನ್ನೆಸ್ ಬುಕ್ ಆಫ್ ರೆಕಾರ್ಡ್​​ನಿಂದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದಾಖಲೆ ನಿರ್ಮಾಣಗೊಂಡದ್ದಕ್ಕೆ ಪ್ರಮಾಣಪತ್ರ ಕೊಡಲಾಗಿದೆ.

ಅಯೋಧ್ಯೆಯಲ್ಲಿ ಪ್ರತೀ ವರ್ಷ ದೀಪೋತ್ಸವ ಆಚರಿಸಲಾಗುತ್ತಿದೆ. ಮರ್ಯಾದಾ ಪುರುಷೋತ್ತಮ ರಾಮ 14 ವರ್ಷ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ್ದ ನೆನಪಿನಲ್ಲಿ ದೀಪೋತ್ಸವ ಆಚರಿಸಲಾಗುತ್ತದೆ. ಈ ಬಾರಿ ಅಯೋಧ್ಯೆಯ ಘಾಟ್​ಗಳಾದ್ಯಂತ 26,17,215 (ಬರೋಬ್ಬರಿ 26 ಲಕ್ಷಕ್ಕೂ ಅಧಿಕ) ದೀಪಗಳನ್ನು ಹಚ್ಚಲಾಯಿತು.

ಹಲವಾರು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸ್ವಯಂಸೇವಕರು ಬಂದು ದೀಪಾರತಿಯಲ್ಲಿ ಭಾಗವಹಿಸಿದ್ದರು.

ಸಾಕಷ್ಟು ಸಂಖ್ಯೆಯಲ್ಲಿ ಸ್ವಯಂಸೇವಕರು ದೀಪಕ್ಕೆ ಎಣ್ಣೆ ಮತ್ತು ಬತ್ತಿಯನ್ನು ಹಾಕಿ ಘಾಟ್​ಗಳ ಉದ್ದಕ್ಕೂ ವಿಶೇಷ ಮಾದರಿಯಲ್ಲಿ ಇಟ್ಟಿದ್ದಾರೆ. ವಿಶ್ವದಾಖಲೆ ಸ್ಥಾಪನೆಯಾಗುತ್ತಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್​ನ ಪ್ರತಿನಿಧಿ ರಿಚರ್ಡ್ ಸ್ಟೆನ್ನಿಂಗ್ ಬಂದಿದ್ದರು. ದೀಪ ಇಡುವ ಪ್ರತಿಯೊಬ್ಬ ವ್ಯಕ್ತಿಯ ಪ್ರವೇಶವನ್ನು ದಾಖಲಿಸಲು ಕ್ಯೂಆರ್ ಕೋಡ್ ಅನ್ನು ಬಳಸಲಾಯಿತು. ಪ್ರತೀ ವಲಯವನ್ನೂ ಎಚ್ಚರಿಕೆಯಿಂದ ಗಮಿಸಲಾಯಿತು ಎಂದು ರಿಚರ್ಡ್ ಸ್ಟೆನ್ನಿಂಗ್ ಮಾಹಿತಿ ನೀಡಿದರು.

error: Content is protected !!