ಮೇಷ
ಹರ್ಷೋಲ್ಲಾಸ. ಆತ್ಮೀಯರ ಜತೆ ಒಡನಾಟ. ಚಿಂತೆಗಳು ಹಿಂದೆ ಸರಿಯುತ್ತವೆ.
ವೃಷಭ
ಇಂದು ಖರ್ಚು ಹೆಚ್ಚಬಹುದು. ಆದರೆ ಚಿಂತೆಯ ವಿಷಯವಲ್ಲ. ಆರೋಗ್ಯ ಸಮಸ್ಯೆ ಪರಿಹಾರ. ಕೌಟುಂಬಿಕ ಸಂತೋಷ, ಉತ್ಸಾಹ.
ಮಿಥುನ
ಕೌಟುಂಬಿಕ ಭಿನ್ನಮತ ಮೂಡಿದರೂ ಬೇಗ ಶಮನ. ನೆಂಟರಿಷ್ಟರ ಆಗಮನ. ವೃತ್ತಿಯಲ್ಲಿನ ಅಸಮಾಧಾನ ನಿವಾರಣೆ. ಧನಪ್ರಾಪ್ತಿ.
ಕಟಕ
ಕೆಲ ಸಮಸ್ಯೆ ನೀವಾಗಿ ತಂದುಕೊಳ್ಳುವಿರಿ. ಅದರ ಪರಿಹಾರ ಕಷ್ಟವಲ್ಲ. ಅಹಂ ಬಿಟ್ಟು ವರ್ತಿಸಿ. ಮನೆಯವರ ಜತೆ ಹೊಂದಾಣಿಕೆ ಮುಖ್ಯ.
ಸಿಂಹ
ಕೌಟುಂಬಿಕವಾಗಿ ಹರ್ಷದ ವಾತಾವರಣ. ಸಮಸ್ಯೆ ನಿವಾರಣೆಯಾದ ನಿರಾಳತೆ. ವೃತ್ತಿಯಲ್ಲಿ ಅನುಕೂಲ ಬೆಳವಣಿಗೆ. ಮಕ್ಕಳಿಂದ ಸಂತೋಷ.
ಕನ್ಯಾ
ಸಂವಹನ ಕೊರತೆ ಯಿಂದ ಆತ್ಮೀಯರ ಜತೆ ಭಿನ್ನಮತ ಮೂಡಬಹುದು. ಸಮಾಧಾನದಿಂದ ಅದನ್ನು ಪರಿಹರಿಸಿಕೊಳ್ಳಿ.
ತುಲಾ
ವ್ಯವಹಾರದಲ್ಲಿ ಪ್ರಗತಿ. ಆರ್ಥಿಕ ಉನ್ನತಿ. ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ. ವದಂತಿಗಳಿಗೆ ಕಿವಿಗೊಡದಿರಿ.
ವೃಶ್ಚಿಕ
ಮನಸ್ಸಿನಲ್ಲೇಕೋ ಉದಾಸ ಭಾವ. ಸಮಸ್ಯೆ ಏನೆಂದು ಅರಿತು ಅದನ್ನು ಬಗೆಹರಿಸಿ. ಮನೆಯವರ ಸಂತೋಷದಲ್ಲಿ ನೀವೂ ಪಾಲ್ಗೊಳ್ಳಿರಿ.
ಧನು
ಆಸ್ತಿ ವಿಷಯಕ್ಕೆ ಸಂಬಂಽಸಿ ಪ್ರತಿಕೂಲ ಬೆಳವಣಿಗೆ ಸಂಭವ. ಸಂಯಮದಿಂದ ನಿಭಾಯಿಸಿ. ಬಂಧುಗಳ ಸಹಕಾರ ಪಡೆಯಿರಿ.
ಮಕರ
ಬಿಡುವಿಲ್ಲದ ದಿನ. ಸದಾ ಒತ್ತಡ. ಆದರೂ ಸಂಜೆ ವೇಳೆಗೆ ಒತ್ತಡ ಮುಗಿದು ನಿರಾಳತೆ ಪಡೆಯುವಿರಿ. ಕೌಟುಂಬಿಕ ಸಮ್ಮಿಲನ.
ಕುಂಭ
ಹೆಚ್ಚಿನ ಹೊಣೆ ಇಂದು ಹೆಗಲೇರಲಿದೆ. ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಸಣ್ಣಪುಟ್ಟ ಲೋಪಗಳಿಗೆ ಚಿಂತಿಸದಿರಿ.
ಮೀನ
ಉಳಿದವರ ಜತೆ ಸಂತೋಷದಲ್ಲಿ ಭಾಗಿಯಾಗಲಾರದ ಅಸಹಾಯಕತೆ. ಮನದ ದುಗುಡ ಮೊದಲು ನಿವಾರಿಸಿಕೊಳ್ಳಿ.
ದಿನಭವಿಷ್ಯ: ಅಪಮಾನವಾದ ಸ್ಥಳದಲ್ಲಿಯೇ ಗೌರವವು ಸಿಗಲಿದೆ, ಪ್ರಯತ್ನಕ್ಕೆ ತಕ್ಕ ಫಲ ಖಂಡಿತ
