Wednesday, October 22, 2025

ಯಾರ್ ಹೇಳಿದ್ದು ತಿಮ್ಮಪ್ಪನ ಲಡ್ಡು ಬೆಲೆ ಜಾಸ್ತಿಯಾಗಿದೆ ಅಂತ? TTD ಸ್ಪಷ್ಟನೆ ಕೊಟ್ಟಿದೆ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ “ತಿರುಮಲ ಶ್ರೀವಾರಿ ಲಡ್ಡು ಪ್ರಸಾದದ ದರ ಹೆಚ್ಚಾಗಿದೆ” ಎಂಬ ಸುದ್ದಿ ಭಕ್ತರಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಈ ಎಲ್ಲ ವದಂತಿಗಳಿಗೆ ತೆರೆ ಬಿದ್ದಿದ್ದು, ತಿರುಮಲ ತಿರುಪತಿ ದೇವಸ್ಥಾನ (TTD) ಸ್ಪಷ್ಟನೆ ನೀಡಿದೆ. ಲಡ್ಡು ಬೆಲೆ ಹೆಚ್ಚಿಸುವ ಯಾವುದೇ ನಿರ್ಧಾರ ಅಥವಾ ಯೋಚನೆಯೂ ಇಲ್ಲವೆಂದು ಟಿಟಿಡಿ ಸ್ಪಷ್ಟವಾಗಿ ತಿಳಿಸಿದೆ.

ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯುಡು ಮಾಧ್ಯಮಗಳೊಂದಿಗೆ ಮಾತನಾಡಿ, “ಲಡ್ಡು ದರ ಹೆಚ್ಚಳದ ಸುದ್ದಿ ಸಂಪೂರ್ಣವಾಗಿ ಸುಳ್ಳು ಮತ್ತು ನಿರಾಧಾರ. ಇಂತಹ ವದಂತಿಗಳನ್ನು ಹಬ್ಬಿಸುವವರು ದೇವಸ್ಥಾನ ಮತ್ತು ಸರ್ಕಾರದ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ,” ಎಂದು ತಿಳಿಸಿದ್ದಾರೆ. ಅವರು ಇಂತಹ ತಪ್ಪು ಮಾಹಿತಿಯನ್ನು ಹಂಚಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಕುರಿತು ಟಿಟಿಡಿ ಪ್ರಕಟಣೆ ನೀಡಿದ್ದು, “ಭಕ್ತರು ಈ ರೀತಿಯ ಸುಳ್ಳು ಸುದ್ದಿಗಳನ್ನು ನಂಬಬಾರದು. ಲಡ್ಡು ಪ್ರಸಾದ ಹಿಂದಿನಂತೆಯೇ ದೊರೆಯುತ್ತದೆ, ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ,” ಎಂದು ತಿಳಿಸಿದೆ.

error: Content is protected !!