Tuesday, October 21, 2025

ರಾಜ್ಯದಲ್ಲಿ ಮುಂದುವರಿದ ಮಳೆಯ ಆರ್ಭಟ: ದಾವಣಗೆರೆ ಕೋಲಾರದಲ್ಲಿ ಕೃಷಿ ಹಾನಿ, ಅನ್ನದಾತ ಕಂಗಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಹಲವೆಡೆ ಮಳೆ ಮುಂದುವರೆದಿದ್ದು ಸಕಷು ಹಾನಿ ಕಷ್ಟನಷ್ಟಗಳಿಗೆ ಕಾರಣವಾಗಿದೆ.
ದಾವಣಗೆರೆ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಸಿಡಿಲು ಸಹಿತ ವ್ಯಾಪಕ ಮಳೆಯಾಗಿದ್ದು ಜನ ಜೀವನ ಬಾಧಿತಗೊಂಡಿದೆ. ಧಾರಾಕಾರ ಮಳೆಯಿಂದಾಗಿ ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮೀಣ ಭಾಗದಲ್ಲಿ ಮೆಕ್ಕೆಜೋಳ ಮತ್ತು ಅಡಿಕೆ ಕೊಯ್ಲಿಗೆ ಅಡ್ಡಿ ಉಂಟಾಗಿದೆ.

ದಾವಣಗೆರೆ ತಾಲ್ಲೂಕಿನ ಬಾಡಾ, ಅಣಬೇರು, ಜರೀಕಟ್ಟೆ ಗ್ರಾಮಗಳಲ್ಲಿ ಭತ್ತದ ಗದ್ದೆ ಹಾಗೂ ತರಕಾರಿ ಬೆಳೆದ ಜಮೀನುಗಳಲ್ಲಿ ನೀರು ನಿಂತಿದ್ದು, ತರಕಾರಿ ಕೊಳೆತು ಹೋಗುವ ಆತಂಕ ರೈತರನ್ನು ಕಾಡುತ್ತಿದೆ. ಕೋಲಾರ ನಗರದಲ್ಲಿ ನಿನ್ನೆ ಸುರಿದ ಮಳೆಯಿಂದ ನಗರದ ಉದ್ಯಾನವನಗಳೆಲ್ಲಾ ಮಳೆಯಿಂದ ಅವೃತ್ತವಾಗಿವೆ.

ಕುವೆಂಪು ಪಾರ್ಕ್ ಪಕ್ಕದಲ್ಲಿರುವ ಚರಂಡಿಯಲ್ಲಿ ಹೂಳು ನೀರು ಸರಾಗವಾಗಿ ಹರಿಯಲು ಅವಕಾಶ ಇಲ್ಲದ ಕಾರಣ ಕೊಳಚೆ ನೀರಿನ ಗುಂಡಿಯಾಗಿ ಪರಿವರ್ತನೆಯಾಗಿದೆ. ಕೆಲವೆಡೆ ತೋಟಗಾರಿಕೆ ಬೆಳೆಗಳಲ್ಲೂ ನೀರು ನಿಂತಿದ್ದು, ಹೂ, ಟೊಮೊಟೋ, ಹೂಕೋಸು ಬೆಳೆದಿರುವ ರೈತರು ಆತಂಕಕ್ಕೀಡಾಗಿದ್ದಾರೆ.

error: Content is protected !!