Tuesday, October 21, 2025

Myth or Fact | ಬೆಳ್ಳಗಿರೋ ಮಕ್ಕಳು ಹುಟ್ಟೋಕೆ ಕೇಸರಿ ಹಾಲು ಕುಡಿದ್ರೆ ಸಾಕಂತೆ! ಇದು ನಿಜನಾ?

“ಗರ್ಭಿಣಿಯವರು ಕೇಸರಿ ಹಾಲು ಕುಡಿದರೆ ಮಗು ಬೆಳ್ಳಗೆ ಹುಟ್ಟುತ್ತಾ?” ಅನ್ನೋ ಪ್ರಶ್ನೆ ನಿಮ್ಮಲ್ಲೂ ಇದ್ಯಾ? ಕೆಲವರು ಹೌದು ಅಂತಾರೆ. ಇನ್ನು ಕೆಲವರು ಸುಳ್ಳು ಅಂತಾರೆ. ಆದರೆ ವೈದ್ಯಕೀಯ ಹಾಗೂ ವಿಜ್ಞಾನ ದೃಷ್ಟಿಯಿಂದ, ಯಾವುದೇ ಆಹಾರ ಅಥವಾ ಪಾನೀಯ ಮಗು ಹುಟ್ಟುವ ಸೌಂದರ್ಯ ಅಥವಾ ಚರ್ಮದ ಬಣ್ಣವನ್ನು ನೇರವಾಗಿ ಬದ್ಲಯಿಸೋದಿಲ್ಲ. ಕೇಸರಿ ಹಾಲು ಪೋಷಕಾಂಶಗಳಲ್ಲಿ ಶ್ರೀಮಂತವಾಗಿದೆ, ಹಾಲಿನಲ್ಲಿ ವಿಟಮಿನ್‌ಗಳು, ಖನಿಜಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಇರುವುದರಿಂದ ಗರ್ಭಿಣಿಯ ಆರೋಗ್ಯ ಮತ್ತು ಶಿಶುಗಳ ಬೆಳವಣಿಗೆಗೆ ಸಹಕಾರಿಯೇ ಹೊರತು ಮಗು ಬೆಳ್ಳಗಾಗೋದಿಲ್ಲ.

ಏನೆಲ್ಲಾ ಪ್ರಯೋಜನ ಇದೆ:

  • ಹಾರ್ಮೋನಲ್ ಸಂತುಲನ: ಕೇಸರಿ ಹಾಲು ಹಾರ್ಮೋನ್ ಸಂತುಲನಕ್ಕೆ ಸಹಾಯ ಮಾಡುತ್ತದೆ.
  • ರಕ್ತಸಂಚಾರ ಸುಧಾರಣೆ: ಶಿಶುಗಳಿಗೆ ಬೇಕಾದ ಹಾರ್ಮೋನ್‌ಗಳು ಮತ್ತು ಪೋಷಕಾಂಶಗಳನ್ನು ತಲುಪಿಸಲು ರಕ್ತಸಂಚಾರವನ್ನು ಸುಧಾರಿಸುತ್ತದೆ.
  • ಮನಶಾಂತಿ ಮತ್ತು ನಿದ್ರೆ: ಕೇಸರಿ ಹಾಲಿನ ಸುಗಂಧ ಮತ್ತು ಪೋಷಕಾಂಶಗಳು ಮನಸ್ಸಿಗೆ ಶಾಂತಿ ನೀಡುತ್ತವೆ.
  • ಶಿಶು ಬೆಳವಣಿಗೆ: ಅಗತ್ಯ ವಿಟಮಿನ್ ಮತ್ತು ಖನಿಜಗಳ ಮೂಲಕ ಮಗುವಿನ ಆರೋಗ್ಯವನ್ನು ಬೆಂಬಲಿಸುತ್ತದೆ.
  • ಇಮ್ಯುನಿಟಿ ವೃದ್ಧಿ: ಗರ್ಭಿಣಿಯ ರೋಗಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಶಿಶು ಆರೋಗ್ಯಕ್ಕೂ ಸಹಕಾರಿ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)
error: Content is protected !!