ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರಾಂತ್ಯದಲ್ಲಿ ಸಂಭವಿಸಿದ್ದ ಎರಡು ಭೂಕಂಪನದ ಬಳಿಕ ಇದೀಗ ಮೂರನೇ ಬಾರಿಗೆ ಭೂಮಿ ಕಂಪಿಸಿದೆ. ಸೋಮವಾರ ಪಾಕಿಸ್ತಾನದಲ್ಲಿ 10 ಕಿ.ಮೀ ಆಳದಲ್ಲಿ 4.7 ತೀವ್ರತೆಯ ಭೂಕಂಪ ಸಂಭವಿಸಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಅ.18 ಹಾಗೂ ಅ.19ರಂದು 4.0 ತೀವ್ರತೆಯಲ್ಲಿ ಭೂಮಿ ಕಂಪಿಸಿದ ಬಳಿಕ ಸೋಮವಾರ 4.7 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಬೆಳಗ್ಗೆ 11:12ರ ಸುಮಾರಿಗೆ ಭೂಮಿ ಕಂಪಿಸಿದ್ದು, ಈ ರೀತಿಯ ಭೂಕಂಪಗಳು ಹೆಚ್ಚು ಅಪಾಯಕಾರಿ ಎಂದು ತಿಳಿದುಬಂದಿದೆ.
ಈ ಭೂಕಂಪನದಿಂದಾಗಿ ಪಂಜಾಬ್‌ನ ಡೇರಾ ಘಾಜಿ ಖಾನ್ ಸುತ್ತಮುತ್ತಿನ ಪ್ರದೇಶದ ಮೇಲೆ ಪರಿಣಾಮ ಬೀರಿದೆ.
ಪಾಕಿಸ್ತಾನವು ವಿಶ್ವದ ಅತ್ಯಂತ ಭೂಕಂಪನಶೀಲ ದೇಶಗಳಲ್ಲಿ ಒಂದಾಗಿದೆ. ಬಲೂಚಿಸ್ತಾನ್, ಖೈಬರ್ ಪಖ್ತುನ್ಖ್ವಾ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್‌ನಂತಹ ಪ್ರಾಂತ್ಯಗಳು ಯುರೇಷಿಯನ್ ಪ್ಲೇಟ್‌ನ ದಕ್ಷಿಣ ಅಂಚಿನಲ್ಲಿದ್ದರೆ, ಸಿಂಧ್ ಮತ್ತು ಪಂಜಾಬ್ ಭಾರತೀಯ ಪ್ಲೇಟ್‌ನ ವಾಯುವ್ಯ ಅಂಚಿನಲ್ಲಿದ್ದು, ಆಗಾಗ್ಗೆ ಭೂಕಂಪಕ್ಕೆ ಕಾರಣವಾಗುತ್ತದೆ.