ಕನ್ನಡಿ ಮುಂದೆ ನಿಂತು ನಮ್ಮ ಮುಖ ನೋಡೋವಾಗ ನಮ್ಮ ತ್ವಚೆ ಹೈಡ್ರೇಟೆಡ್ ಆಗಿ ಮೃವಾಗಿದ್ರೆ ತುಂಬಾ ಚೆನ್ನ. ಆದ್ರೆ ಡ್ರೈ ಆಗಿ ಪಿಂಪಲ್, ಕಲೆ ಇದ್ರೆ ಕನ್ನಡಿ ನೋಡೋದೇ ಬೇಡ ಅನಿಸುತ್ತೆ. ಇಂತಹ ಸಂದರ್ಭದಲ್ಲಿ ಅಲೋವೆರಾ ಜೆಲ್ ನಿಮ್ಮ ಉಪಯೋಗಕ್ಕೆ ಬರುತ್ತೆ ನೋಡಿ. ಆದರೆ, ಅದನ್ನು ಹೇಗೆ ಬಳಸಬೇಕು ಎಂಬುದು ಮುಖ್ಯ.
ಉಪಯೋಗಿಸೋದು ಹೇಗೆ? : ಮೊದಲಿಗೆ, ಮುಖವನ್ನು ಸ್ವಚ್ಛವಾಗಿ ತೊಳೆಯಿರಿ. ನಂತರ ಸ್ವಲ್ಪ ತಾಜಾ ಅಲೋವೆರಾ ಜೆಲ್ ಕೈ ಮೇಲೆ ತೆಗೆದುಕೊಳ್ಳಿ. ಮುಖದ ಮೇಲೆ ಸಮಾನವಾಗಿ ಹಚ್ಚಿ, ಮೃದುವಾಗಿ ಮಸಾಜ್ ಮಾಡಿ. ಜೆಲ್ ಸುಮಾರು 15-20 ನಿಮಿಷಗಳ ಕಾಲ ಚರ್ಮದಲ್ಲಿ ಇರಲಿ. ಇದರಿಂದ ಚರ್ಮದ ಒಳಗಿನ ತೇವವನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಆಗುತ್ತದೆ. ನಂತರ ಉಗುರು ಬೆಚ್ಚಗಿನಿ ನೀರಿನಿಂದ ಮುಖವನ್ನು ತೊಳೆಯಿರಿ.
ಅಲೋವೆರಾ ಜೆಲ್ ನಿತ್ಯ ಉಪಯೋಗಿಸಿದರೆ ಚರ್ಮದಲ್ಲಿ ಮೃದುತನ ಹೆಚ್ಚಾಗುತ್ತದೆ, ಉರಿಯುವಿಕೆ ಮತ್ತು ಕೆಂಪಾಗುವುದು ಕಡಿಮೆಯಾಗುತ್ತದೆ, ಮತ್ತು ಚರ್ಮದ ಪ್ರಕಾಶಮಾನವಾಗಿ ಕಾಣಿಸುತ್ತದೆ.ಬೇಕಿದ್ದರೆ ಕೆಲವು ಹಣ್ಣು ಅಥವಾ ಮೊಸರು ಸೇರಿಸಿ ನೈಸರ್ಗಿಕ ಫೇಸ್‌ಪ್ಯಾಕ್ ಮಾಡಬಹುದು, ಇದರಿಂದ ಚರ್ಮ ಇನ್ನಷ್ಟು ಪೋಷಣೆ ಪಡೆಯುತ್ತದೆ.
ಇಂತಹ ಸರಳ ವಿಧಾನದಿಂದ ನೀವು ರಾಸಾಯನಿಕ ಉತ್ಪನ್ನಗಳನ್ನು ಕಡಿಮೆ ಬಳಸುತ್ತೀರಿ ಮತ್ತು ನಿಮ್ಮ ಚರ್ಮಕ್ಕೆ ಸ್ವಾಭಾವಿಕ ಆರೋಗ್ಯವನ್ನು ನೀಡಬಹುದು. ಅಲೋವೆರಾ ಜೆಲ್ ನಿತ್ಯ ಬಳಸುವುದು ಚರ್ಮದ ಆರೈಕೆಯ ಅತ್ಯುತ್ತಮ ಮಾರ್ಗವಾಗಿದೆ.((Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)