ದೀಪಾವಳಿ ಹಬ್ಬ ಅಂದರೆ ಸಿಹಿತಿಂಡಿಗಳ ಸಂಭ್ರಮವೇ ಸರಿ! ಮನೆಮನೆಗಳಲ್ಲಿ ಹಬ್ಬದ ರುಚಿ ಮತ್ತು ಸುಗಂಧ ತುಂಬಿರುತ್ತದೆ. ಇಂತಹ ಸಂದರ್ಭದಲ್ಲೇ ಹಳೆಯ ಕಾಲದಿಂದಲೂ ಮನೆಯಲ್ಲಿ ಮಾಡುವ, ಆದರೆ ತುಂಬಾ ರುಚಿಯಾದ ಕಲಸಿದ ಸಿಹಿ ಅವಲಕ್ಕಿ ಇವತ್ತು ಹೇಗೆ ಮಾಡೋದು ನೋಡೋಣ.
ಬೇಕಾಗುವ ಸಾಮಗ್ರಿಗಳು:
ಅವಲಕ್ಕಿ – 1 ಕಪ್
ಬೆಲ್ಲ – ¾ ಕಪ್ (ರುಚಿಗೆ ತಕ್ಕಂತೆ)
ಕೊಬ್ಬರಿ ತುರಿ – ½ ಕಪ್
ಏಲಕ್ಕಿ ಪುಡಿ – ¼ ಟೀ ಸ್ಪೂನ್
ತುಪ್ಪ – 2 ಟೇಬಲ್ ಸ್ಪೂನ್
ಗೋಡಂಬಿ, ದ್ರಾಕ್ಷಿ – ಬೇಕಾದಷ್ಟು
ಮಾಡುವ ವಿಧಾನ:
ಮೊದಲು ಅವಲಕ್ಕಿಯನ್ನು ತೊಳೆದು 10 ನಿಮಿಷ ಮೃದುವಾಗಲು ಬಿಟ್ಟು ಬಿಡಿ.
ಒಂದು ಪ್ಯಾನ್‌ನಲ್ಲಿ ತುಪ್ಪ ಬಿಸಿ ಮಾಡಿ, ಅದರಲ್ಲಿ ಗೋಡಂಬಿ, ದ್ರಾಕ್ಷಿ ಹಾಕಿ ಸ್ವಲ್ಪ ಫ್ರೈ ಮಾಡಿ ಬದಿಗಿಡಿ. ಅದೇ ಪ್ಯಾನ್‌ನಲ್ಲಿ ಬೆಲ್ಲ ಮತ್ತು ಸ್ವಲ್ಪ ನೀರು ಹಾಕಿ ಸಿಹಿ ಸಿರಪ್ ತಯಾರಿಸಿ.
ಬೆಲ್ಲ ಕರಗಿದ ಮೇಲೆ ಅದಕ್ಕೆ ಕೊಬ್ಬರಿ ತುರಿ ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ನಂತರ ಮೃದುವಾದ ಅವಲಕ್ಕಿ ಸೇರಿಸಿ ನಿಧಾನವಾಗಿ ಕಲಸಿ. ಕೊನೆಗೆ ಹುರಿದ ಗೋಡಂಬಿ, ದ್ರಾಕ್ಷಿ ಸೇರಿಸಿ ಬೆರೆಸಿ ಬಿಸಿ ಬಿಸಿ ಸಿಹಿ ಅವಲಕ್ಕಿ ಸರ್ವ್ ಮಾಡಿ.