ಇಂದಿನ ವೇಗದ ಜೀವನದಲ್ಲಿ ರಾತ್ರಿ ಹೊತ್ತು ನಿದ್ರೆ ಬಾರದ ಸಮಸ್ಯೆ ಬಹುತೇಕ ಎಲ್ಲರಲ್ಲೂ ಸಾಮಾನ್ಯವಾಗಿದೆ. ಕೆಲಸದ ಒತ್ತಡ, ಮೊಬೈಲ್ ಬಳಕೆ, ಅಸಮತೋಲಿತ ಆಹಾರ ಕ್ರಮ ಮತ್ತು ಮಾನಸಿಕ ಒತ್ತಡ ಇವುಗಳೆಲ್ಲ ನಮ್ಮ ನಿದ್ರೆಯನ್ನ ಹಾಲು ಮಾಡುತ್ತಿವೆ. ಹಲವರು ರಾತ್ರಿ ಹೊತ್ತು ಹಾಸಿಗೆಯಲ್ಲಿ ಮಲಗಿದರೂ ಕಣ್ಣು ಮುಚ್ಚುವುದೇ ಕಷ್ಟವಾಗುತ್ತದೆ. ಆದರೆ ಅದ್ಕಕೆ ಚಿಂತೆ ಮಾಡ್ಬೇಡಿ, ಈ ಕೆಲವು ಸಿಂಪಲ್ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಿದ್ರೆ ಸುಲಭವಾಗಿ ಬರುತ್ತೆ ನೋಡ್ತಾ ಇರಿ.
- ನಿಯಮಿತ ಸಮಯ ಪಾಲನೆ: ಪ್ರತಿದಿನ ಒಂದೇ ಸಮಯದಲ್ಲಿ ಮಲಗುವುದು ಮತ್ತು ಏಳುವುದು ದೇಹದ ನೈಸರ್ಗಿಕ ಗಡಿಯಾರವನ್ನು ಸಮತೋಲನಗೊಳಿಸುತ್ತದೆ.
- ಮೊಬೈಲ್ ಮತ್ತು ಟಿವಿಯಿಂದ ದೂರವಿರಿ: ನಿದ್ರೆಗೂ ಮುನ್ನ ಕನಿಷ್ಠ ಅರ್ಧಗಂಟೆ ಮೊಬೈಲ್, ಟಿವಿ ಅಥವಾ ಲ್ಯಾಪ್‌ಟಾಪ್‌ನಿಂದ ನೋಡ್ಬೇಡಿ.
- ಹಾಲು ಅಥವಾ ಹರ್ಬಲ್ ಟೀ ಸೇವನೆ: ಬಿಸಿ ಹಾಲು ಅಥವಾ ತುಳಸಿಯ ಹರ್ಬಲ್ ಟೀ ಮನಸ್ಸಿಗೆ ಶಾಂತಿ ನೀಡುತ್ತದೆ.
- ಧ್ಯಾನ ಮತ್ತು ಉಸಿರಾಟ ವ್ಯಾಯಾಮ: ಮಲಗುವ ಮೊದಲು 10 ನಿಮಿಷ ಧ್ಯಾನ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ.
- ಬೆಡ್ ರೂಂ ವಾತಾವರಣ: ಕೋಣೆ ತಂಪಾಗಿದ್ದು, ಬೆಳಕು ಕಡಿಮೆ ಹಾಗೂ ಶಾಂತವಾಗಿದ್ದರೆ ನಿದ್ರೆ ಸುಲಭವಾಗಿ ಬರುತ್ತದೆ.