Tuesday, December 23, 2025

ಮೂರನೇ ದಿನದ ‘ಸಮಾಧಿ ಶೋಧ’ ಅಂತ್ಯ: ಇನ್ನು ಎಲ್ಲರ ಚಿತ್ತ ನಾಳೆಯ ದಿನದತ್ತ!

ಹೊಸ ದಿಗಂತ ಡಿಜಿಟಲ್ ಡೆಸ್ಕ್;

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಹೂತಿಟ್ಟ ಪ್ರಕರಣದ ತನಿಖೆಯ ಭಾಗವಾಗಿ ಬುಧವಾರ ನಡೆದ ಪಾಯಿಂಟ್ 2,3,4, 5. ಸಮಾಧಿ ಅಗೆಯುವ ಪ್ರಕ್ರಿಯೆ ಸಂಜೆಗೆ ಪೂರ್ಣಗೊಂಡಿದೆ.

ಈ ಕಾರ್ಯಾಚರಣೆಯಲ್ಲಿ ಹೊರಬಂದ ಅಂಶಗಳು ಏನು ಎಂಬುದನ್ನು ತನಿಖಾಧಿಕಾರಿಗಳು ಬಹಿರಂಗಗೊಳಿಸಿಲ್ಲ.

ಅನಾಮಿಕ ದೂರುದಾರ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಎಸ್ ಐಟಿ ಅಧಿಕಾರಿಗಳ ತಂಡದಿಂದ ಆತ ತಿಳಿಸಿದ ಸ್ಥಳದಲ್ಲಿ ದಿನವಿಡೀ ಅಗೆತ ನಡೆಸಿದ್ದರು.

ಬುಧವಾರ ನೇತ್ರಾವತಿ ಸ್ನಾನ ಘಟ್ಟದಲ್ಲಿ ಗುರುತಿಸಲಾದ ಸ್ಥಳದಲ್ಲಿ ಅಧಿಕಾರಿಗಳ ತಂಡ ಬಿಗಿ ಬಂದೋಬಸ್ತ್ ನಲ್ಲಿ ಅಗೆಯುವ ಕಾರ್ಯ ನಡೆಸಿತು. ಇದರೊಂದಿಗೆ ಇಂದಿನ ಕಾರ್ಯಾಚರಣೆಯನ್ನು ಸದ್ಯಕ್ಕೆ ಎಸ್ಐಟಿ ಸ್ಥಗಿತಗೊಳಿಸಿತು.

ನಾಳೆ ಮತ್ತೆ ಅನಾಮಿಕ ಹೇಳುವ ಮುಂದಿನ ಪಾಯಿಂಟ್ ನಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂದು ಹೇಳಲಾಗಿದೆ.

error: Content is protected !!