Tuesday, October 21, 2025

ಕಡಿಮೆ ಬೋನಸ್, ಹೈ-ವೋಲ್ಟೇಜ್ ಪ್ರತಿಭಟನೆ: ಉಚಿತವಾಯಿತು ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ ಪ್ರಯಾಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಗೆ ದೀಪಾವಳಿ ಹಬ್ಬದ ಬೋನಸ್ ಆಗಿ ಕೇವಲ 1,100 ರೂಪಾಯಿ ಕೊಟ್ಟಿರೋದಕ್ಕೆ ಫತೇಹಾಬಾದ್ ಟೋಲ್ ಪ್ಲಾಜಾದ 21 ಉದ್ಯೋಗಿಗಳು ಯಾವುದೇ ಟೋಲ್ ತೆಗೆದುಕೊಳ್ಳದೆ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯ ಫತೇಹಾಬಾದ್ ಟೋಲ್ ಪ್ಲಾಜಾದಲ್ಲಿ ಸೈನ್ ಆ್ಯಂಡ್ ದಾತಾರ್ ಕಂಪನಿಯು ನಿರ್ವಹಿಸುತ್ತಿದ್ದು ಅಲ್ಲಿನ ಉದ್ಯೋಗಿಗಳಿಕೆ ಕೇವಲ 1,100 ರೂಪಾಯಿ ಬೋನಸ್ ಆಗಿ ಸಿಕ್ಕಿರೋದಕ್ಕೆ ಸಾವಿರಾರು ವಾಹನಗಳನ್ನು ಉಚಿತವಾಗಿ ಟೋಲ್ ದಾಟಿಸಿ ಬಿಟ್ಟಿದ್ದಾರೆ.

ಈ ವೇಳೆ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಸ್ಥಳಕ್ಕೆ ಧಾವಿಸಿ ಶಾಂತಿಯನ್ನು ಕಾಪಾಡಲು ಕ್ರಮ ಕೈಗೊಂಡರು. ಟೋಲ್ ಸಂಸ್ಥೆಯ ಹಿರಿಯ ಅಧಿಕಾರಿಗಳು ನೌಕರರ ಬೇಡಿಕೆಯನ್ನು ಪರಿಶೀಲಿಸಿ ಶೇಕಡಾ 10 ವೇತನ ಹೆಚ್ಚಳ ಮಾಡುವ ಮೂಲಕ ತಕ್ಷಣದ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಈ ಭರವಸೆಯಿಂದ ಟೋಲ್ ಸಿಬ್ಬಂದಿ ತಮ್ಮ ಕರ್ತವ್ಯಕ್ಕೆ ಮರಳಿದಿದ್ದು, ಎರಡು ಗಂಟೆಗಳ ವ್ಯತ್ಯಯದ ನಂತರ ಟೋಲ್ ಕಾರ್ಯಾಚರಣೆ ಸಾಮಾನ್ಯ ಸ್ಥಿತಿಗೆ ಬಂದಿತು.

error: Content is protected !!