Wednesday, October 22, 2025

ಕನಸಿನ ಮನೆಯಲ್ಲಿ ಕರುಳನ್ನೇ ಸುಟ್ಟ ಬೆಂಕಿ: ಮಗುವೂ ಸೇರಿದಂತೆ ನಾಲ್ವರ ದುರಂತ ಅಂತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವಿ ಮುಂಬೈ ಟೌನ್‌ಶಿಪ್‌ನ ವಾಶಿ ಪ್ರದೇಶದ ಸೆಕ್ಟರ್ 14ರ ರಹೇಜಾ ರೆಸಿಡೆನ್ಸಿ ಎಂಜಿಎಂ ಕಾಂಪ್ಲೆಕ್ಸಿನ 10ನೇ ಮಹಡಿಯಲ್ಲಿ ಸೋಮವಾರ ತಡರಾತ್ರಿ 12:30 ಕ್ಕೆ ಭೀಕರ ಬೆಂಕಿ ಅವಘಡ ಸಂಭವಿಸಿದೆ.

ಈ ಅವಘಡದಲ್ಲಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು 6 ವರ್ಷದ ಬಾಲಕಿ ಸಾವನ್ನಪ್ಪಿದ್ದು, ಇನ್ನೂ 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ತಕ್ಷಣ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬೆಂಕಿ ಕೆನ್ನಾಲಿಗೆ 11 ಮತ್ತು 12ನೇ ಮಹಡಿಗಳಿಗೂ ಹರಡಿದ್ದು, ಸ್ಥಳೀಯ ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿತ್ತು. ಸ್ಥಳಕ್ಕೆ 40 ಅಗ್ನಿಶಾಮಕ ಸಿಬ್ಬಂದಿ, 8 ಅಗ್ನಿಶಾಮಕ ವಾಹನಗಳು ಹಾಗೂ ಪೊಲೀಸರು ತಕ್ಷಣ ಧಾವಿಸಿ ಬೆಳಗ್ಗೆ 4 ಗಂಟೆಯೊಳಗೆ ಸಂಪೂರ್ಣವಾಗಿ ಬೆಂಕಿ ನಂದಿಸಲಾಯಿತು. ಅಗ್ನಿ ಅವಘಡಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

error: Content is protected !!