ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿಮಾನಿಯೊಬ್ಬ ಪ್ರೇಮ್ ಜನ್ಮದಿನಕ್ಕೆ ರಕ್ತದಲ್ಲಿ ಪತ್ರ ಬರೆದಿದ್ದಾನೆ. ಈ ಪತ್ರ ನೋಡಿ ಪ್ರೇಮ್ ಗರಂ ಆಗಿದ್ದಾರೆ.
ಅಭಿಮಾನಿ ತನ್ನ ರಕ್ತ ತೆಗೆಸಿ ಅದನ್ನೇ ಇಂಕ್ ಆಗಿ ಬಳಸಿ `ಹ್ಯಾಪಿ ಬರ್ತ್‍ಡೇ ಬಾಸ್’ ಎಂದು ಬರೆದು ಚಿತ್ರ ಬಿಡಿಸಿಕೊಂಡಿದ್ದಾನೆ. ಅದನ್ನು ಪ್ರೇಮ್‍ಗೆ ತಲುಪಿಸುವ ಯೋಜನೆ ಹೊಂದಿದ್ದ. ಆದರೆ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಬುದ್ಧಿಮಾತು ಹೇಳಿರುವ ಪ್ರೇಮ್ “ಮಕ್ಕಳೇ ಇಂಥಹ ತಪ್ಪು ಮಾಡಬೇಡಿ” ಎಂದು ತಮ್ಮದೇ ಗ್ರಾಮೀಣ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ. “ಅಂದಾಭಿಮಾನ ತೋರಸಬೇಡಿ. ನಿಮ್ಮ ಪ್ರೀತಿಯನ್ನು ಈ ರೀತಿ ತೋರಿಸುವುದು ತಪ್ಪು” ಎಂದು ಹೇಳುವ ಮೂಲಕ ಬೇಸರ ಹೊರ ಹಾಕಿ, ತಿಳುವಳಿಕೆ ಹೇಳಿದ್ದಾರೆ.
ರಕ್ತದಲ್ಲಿ ಚಿತ್ರ ಬಿಡಿಸಿದ ಅಭಿಮಾನಿ ಮೇಲೆ ಪ್ರೇಮ್ ಗರಂ

