ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹಲವೆಡೆ 2.9 ತೀವ್ರತೆಯ ಭೂಕಂಪನ ದಾಖಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ಮಾಹಿತಿ ನೀಡಿದ್ದು, ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ, ಯರನಾಳ, ಹತ್ತರಕಿಹಾಳ, ನಂದ್ಯಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ ಎಂದು ತಿಳಿಸಿದೆ.
ಮನಗೂಳಿ ಪಟ್ಟಣದಲ್ಲಿ ಭೂಮಿಯಾಳದಿಂದ ಮೂರು ಬಾರಿ ಭಾರೀ ಶಬ್ದ ಕೇಳಿಸಿದ್ದು, 2.5 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ. ಭಾರೀ ಶಬ್ದಕ್ಕೆ ಆತಂಕಗೊಂಡ ಜನರು ಮನೆಯಿಂದ ಓಡಿ ಹೊರಬಂದಿದ್ದಾರೆ.
ಕಡಿಮೆ ತೀವ್ರತೆಯ ಭೂಕಂಪನ ಸಂಭವಿಸಿದೆ. ಹೀಗಾಗಿ ಜನರು ಭಯಪಡಬಾರದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

