Tuesday, November 4, 2025

ಕಂಠಪೂರ್ತಿ ಕುಡಿದುಕೊಂಡು ಬಂದು ಬಿಗ್‌ಬಾಸ್‌ ಹೋಸ್ಟ್‌ ಮಾಡಿದ್ರಾ ಸಲ್ಮಾನ್‌ ಖಾನ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ಸಲ್ಮಾನ್ ಖಾನ್ ‘ಬಿಗ್ ಬಾಸ್’ ಶೋ ನಡೆಸಿಕೊಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವೀಕೆಂಡ್​ನಲ್ಲಿ ಅವರು ನಡೆಸಿಕೊಡೋ ಎಪಿಸೋಡ್ ತುಂಬಾನೇ ಖಡಕ್ ಆಗಿರುತ್ತದೆ.

ಆದರೆ ವೀಕೆಂಡ್ ಎಪಿಸೋಡ್​ನ ಕಂಠಪೂರ್ತಿ ಕುಡಿದು ನಡೆಸಿಕೊಟ್ಟಿದ್ದಾರೆ ಎಂಬ ಆರೋಪ ಸಲ್ಮಾನ್ ಖಾನ್ ಅವರ ಮೇಲೆ ಬಂದಿದೆ. ಸಲ್ಮಾನ್ ಖಾನ್ ಮ್ಯಾನರಿಸಮ್ ಬೇರೆಯದೇ ರೀತಿ ಇದೆ. ಅವರು ಏನೇ ಮಾಡಿದರೂ ಯಾರೂ ಪ್ರಶ್ನೆ ಮಾಡೋದಿಲ್ಲ. ಅವರು ಅನೇಕ ಬಾರಿ ಬಿಗ್ ಬಾಸ್​ನಲ್ಲಿ ಸಿಟ್ಟಾಗಿದ್ದೂ ಇದೆ. ಈಗ ಸಲ್ಮಾನ್ ಖಾನ್ ಅವರು ವೀಕೆಂಡ್ ಎಪಿಸೋಡ್ ನಡೆಸಿಕೊಡುವಾಗ ಕುಡಿದವರಂತೆ ಕಂಡು ಬಂದರು. ಅವರ ಮುಖ ನೋಡಿದರೆ ಏನೋ ಸರಿ ಇಲ್ಲ ಎಂಬ ವಿಚಾರ ತಿಳಿಯುತ್ತಿತ್ತು.

ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಲ್ಮಾನ್ ಖಾನ್ ಅವರು ವೀಕೆಂಡ್ ಎಪಿಸೋಡ್ ನಡೆಸಿಕೊಡುವಾಗ ಹೇಗೆ ಕುಡಿದಿದ್ದಾರೆ ನೋಡಿ ಎಂದು ಅನೇಕರು ಟೀಕೆ ಮಾಡಿದ್ದರು. ಇದಕ್ಕೆ ಅವರ ಅಭಿಮಾನಿಗಳು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.

error: Content is protected !!