Monday, October 27, 2025

Rice series 7 | ಫಟಾಫಟ್ ಅಂತ ರೆಡಿ ಆಗುತ್ತೆ ನೋಡಿ ಈ ಜೀರಾ ರೈಸ್!

ಭಾರತೀಯ ಅಡುಗೆಗಳಲ್ಲಿ ಅತ್ಯಂತ ಜನಪ್ರಿಯ ಉಪಹಾರಗಳಲ್ಲಿ ಜೀರಿಗೆ ಅನ್ನ ಅಥವಾ ಜೀರಾ ರೈಸ್ ಒಂದು ಪ್ರಮುಖ ಆಹಾರ. ಇದನ್ನು ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಹೋಟೆಲ್ ಸ್ಟೈಲ್ ಜೀರಿಗೆ ರೈಸ್ ಮನೆಯಲ್ಲೇ ಸಿಂಪಲ್ ರೀತಿಯಲ್ಲಿ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

ಅಕ್ಕಿ – 1 ಕಪ್
ನೀರು – 2 ಕಪ್
ಜೀರಿಗೆ – 1½ ಟೀ ಸ್ಪೂನ್
ತುಪ್ಪ ಅಥವಾ ಎಣ್ಣೆ – 2 ಟೇಬಲ್ ಸ್ಪೂನ್
ಹಸಿಮೆಣಸು – 2 (ಚೀರಿದ)
ಶುಂಠಿ ತುಂಡು – 1 ಟೀ ಸ್ಪೂನ್ (ಚೂರು ಮಾಡಿದ)
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ:

ಅಕ್ಕಿಯನ್ನು ಚೆನ್ನಾಗಿ ತೊಳೆದು 20 ನಿಮಿಷ ನೀರಿನಲ್ಲಿ ನೆನೆಸಿಡಿ. ಈಗ ಒಂದು ಪಾತ್ರೆಯಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ. ಅದಕ್ಕೆ ಜೀರಿಗೆ ಹಾಕಿ ಬಳಿಕ ಹಸಿಮೆಣಸು ಮತ್ತು ಶುಂಠಿ ಸೇರಿಸಿ ಸುವಾಸನೆ ಬರುವವರೆಗೆ ಹುರಿಯಿರಿ. ಈಗ ತೊಳೆದ ಅಕ್ಕಿಯನ್ನು ಸೇರಿಸಿ ಒಂದು ನಿಮಿಷ ನಿಧಾನವಾಗಿ ಹುರಿಯಿರಿ. ಇದು ಅಕ್ಕಿಗೆ ರುಚಿ ಮತ್ತು ಮೃದುತ್ವ ಕೊಡುವುದು.

ಈಗ ನೀರು ಮತ್ತು ಉಪ್ಪು ಸೇರಿಸಿ, ಮುಚ್ಚಿ ಮಧ್ಯಮ ಉರಿಯಲ್ಲಿ 10-12 ನಿಮಿಷ ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ. ಬಿಸಿ ಬಿಸಿ ಜೀರಿಗೆ ಅನ್ನವನ್ನು ಗ್ರೇವಿ ಅಥವಾ ಮೊಸರು ಬಜ್ಜಿ ಜೊತೆಗೆ ಸರ್ವ್ ಮಾಡಿ.

error: Content is protected !!