Sunday, October 26, 2025

CINE | ಜನನಾಯಕನ ಪಾತ್ರದಲ್ಲಿ ಶಿವಣ್ಣ: ಹ್ಯಾಟ್ರಿಕ್ ಹೀರೋ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ದೀಪಾವಳಿಗೆ ಕನ್ನಡ ಸಿನಿಪ್ರಿಯರಿಗೆ ಖುಷಿಯ ಸುದ್ಧಿ! ನಟ ಶಿವರಾಜ್‌ಕುಮಾರ್ ಮತ್ತೊಂದು ಭಿನ್ನಮಾದರಿಯ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲು ರೆಡಿಯಾಗಿದ್ದಾರೆ. ಅವರ ಹೊಸ ಸಿನಿಮಾ ‘ಗುಮ್ಮಡಿ ನರಸಯ್ಯ’ ಎಂಬ ಶೀರ್ಷಿಕೆಯಡಿ ನಿರ್ಮಾಣವಾಗುತ್ತಿದ್ದು, ಈ ಚಿತ್ರವು ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ಬಿಡುಗಡೆಗೊಂಡ ಫಸ್ಟ್ ಲುಕ್‌ನಲ್ಲಿ ಶಿವರಾಜ್‌ಕುಮಾರ್ ಅವರ ಗ್ರಾಮೀಣ ಜನನಾಯಕನ ಸ್ಟೈಲ್ ಟ್ರೆಂಡ್ ಆಗಿದ್ದು, ಅಭಿಮಾನಿಗಳಲ್ಲಿ ಹೊಸ ಕೌತುಕ ಹುಟ್ಟಿಸಿದೆ.

ಪರಮೇಶ್ವರ್ ಹಿವ್ರಲೆ ನಿರ್ದೇಶನದ ಈ ಚಿತ್ರವನ್ನು ಎನ್. ಸುರೇಶ್ ರೆಡ್ಡಿ ನಿರ್ಮಿಸುತ್ತಿದ್ದಾರೆ. ತೆಲುಗಿನಲ್ಲಿ ‘ಚಿರು ಗೋಡವಾಲು’ ಮತ್ತು ‘ಲಾವಣ್ಯ ವಿತ್ ಲವ್ ಬಾಯ್ಸ್’ ಚಿತ್ರಗಳ ಮೂಲಕ ಖ್ಯಾತಿ ಪಡೆದ ಹಿವ್ರಲೆ, ಈ ಬಾರಿ ನಿಜ ಜೀವನದ ಹೋರಾಟಗಾರನ ಕತೆಯನ್ನು ಪರದೆಯ ಮೇಲೆ ತರಲು ಸಜ್ಜಾಗಿದ್ದಾರೆ. ಚಿತ್ರದ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ.

ಗುಮ್ಮಡಿ ನರಸಯ್ಯ ಯಾರು?
ಆಂಧ್ರ ಪ್ರದೇಶದ ಕಮ್ಮಮ್ ಜಿಲ್ಲೆಯ ಟೇಕುಲಪಲ್ಲಿ ಗ್ರಾಮದ ಮೂಲದ ಜನಪರ ನಾಯಕ ಗುಮ್ಮಡಿ ನರಸಯ್ಯ, ಜನರ ಹಕ್ಕುಗಳಿಗಾಗಿ ಹೋರಾಡಿದ ಕಮ್ಯೂನಿಸ್ಟ್ ನಾಯಕರಲ್ಲಿ ಒಬ್ಬರು. “ನರಸಣ್ಣ” ಎಂದೇ ಜನಪರ ಪ್ರೀತಿ ಗಳಿಸಿದ ಅವರು, ಸರಳ ಜೀವನ ನಡೆಸುತ್ತಾ ಜನರ ಮಧ್ಯೆ ಉಳಿದಿದ್ದರು. ಐದು ಬಾರಿ ಯೆಲ್ಲಾಂಡು ಕ್ಷೇತ್ರದ ಶಾಸಕರಾಗಿದ್ದ ನರಸಯ್ಯ ಅವರು ಎಂಎಲ್‌ಎ ಆಗಿದ್ದರೂ ಸೈಕಲ್‌ನಲ್ಲಿ ಸಂಚರಿಸಿ, ಸಾಮಾನ್ಯರ ಜೊತೆ ಊಟ ಮಾಡುತ್ತಿದ್ದರು.

error: Content is protected !!