ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಟಾಕಿ ಸಿಡಿಸಿ ಅದ್ಧೂರಿಯಾಗಿ ದೀಪಾವಳಿ ಆಚರಣೆ ಮಾಡಿದ್ದು ಆಗಿದೆ, ಆದರೆ ಪಟಾಕಿ ಸದ್ದಿಗೆ ನಾಯಿಗಳು ಹೆದರಿ ಓಡಿ ಹೋಗಿವೆ. ಹೌದು, ಪಟಾಕಿ ಶಬ್ಧಕ್ಕೆ ಬೆಚ್ಚಿಬಿದ್ದು ರಾಜಧಾನಿ ಬೆಂಗಳೂರಿನಲ್ಲಿ ನೂರಕ್ಕೂ ಅಧಿಕ ಬೀದಿನಾಯಿಗಳು ನಾಪತ್ತೆಯಾಗಿವೆ.
ಯುನೈಟೆಡ್ ಫಾರ್ ಕಂಪ್ಯಾಷನ್ ಪ್ರತಿನಿಧಿಯ ಪ್ರಕಾರ ವಾಟ್ಸಾಪ್‌ನಲ್ಲಿ ಪ್ರಾಣಿ ಪ್ರಿಯರ ಸಮುದಾಯವಾದ ವಾಯ್ಸ್ ಫಾರ್ ಅವರ್ ವಾಯ್ಸ್‌ಲೆಸ್ ಮೂಲಕ ನಾಲ್ಕು ದಿನಗಳಲ್ಲಿ ಸುಮಾರು ನೂರು ನಾಯಿ ನಾಪತ್ತೆ ಪ್ರಕರಣಗಳು ವರದಿಯಾಗಿವೆ ಎನ್ನಲಾಗಿದೆ.
ಶಬ್ದದಿಂದ ಬೀದಿ ನಾಯಿಗಳ ಭಯಗೊಂಡಿದೆ. ಈ ಬಗ್ಗೆ ನಾವು ಮನುಷ್ಯರು ಅರಿತುಕೊಳ್ಳಬೇಕು ಎಂದು ಯುನೈಟೆಡ್ ಫಾರ್ ಕಂಪ್ಯಾಷನ್ ಹೇಳಿದೆ. ನಾಯಿಗಳು ಪಟಾಕಿ ಶಬ್ದಕ್ಕೆ ಭಯಗೊಂಡು ತನ್ನ ಊರನ್ನು ಬಿಟ್ಟು ಬೇರೆ ಕಡೆ ಹೋಗುತ್ತದೆ, ಆಶ್ರಯಕ್ಕಾಗಿ ಬೀದಿ ಬೀದಿ ಅಲೆಮಾರಿಯಂತೆ ತಿರುಗಾಡುತ್ತದೆ.
ಊಟ ಇಲ್ಲದೆ, ಬೇರೆ ನಾಯಿಗಳ ದಾಳಿಗೆ ಒಳಗಾಗುತ್ತದೆ ಎಂದು ಹೇಳಿದ್ದಾರೆ. ರಾಜಾಜಿನಗರದ ನಿವಾಸಿಯೊಬ್ಬರ ಗೋಲ್ಡನ್ ರಿಟ್ರೈವರ್ ನಾಯಿ ಕಣ್ಮರೆಯಾಗಿದೆ. ಸಂಭ್ರಮದ ನಡುವೆ ಇದೊಂದು ದುಃಖಕರ ವಿಚಾರ, ಆ ಶ್ವಾನಕ್ಕಾಗಿ ರಾತ್ರಿ, ಹಗಲು ಎನ್ನದೇ ಹುಡುಕುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಪಟಾಕಿ ಸದ್ದಿಗೆ ಹೆದರಿದ ಬೀದಿನಾಯಿಗಳು, ಬೆಂಗಳೂರಿನಲ್ಲಿ ನೂರು ಶ್ವಾನ ನಾಪತ್ತೆ!

