ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಪ್ರಸಿದ್ಧ ಲೌವ್ರೆ ಮ್ಯೂಸಿಯಂನಲ್ಲಿ ನಡೆದ ಅಚ್ಚರಿ ಹೊತ್ತ ಐತಿಹಾಸಿಕ ಕಳ್ಳತನದ ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳ್ಳರು ಕಟ್ಟಡ ನಿರ್ಮಾಣ ಕಾರ್ಮಿಕರಂತೆ ವೇಷ ಧರಿಸಿ, ಜರ್ಮನ್ ನಿರ್ಮಿತ ಹೈಡ್ರಾಲಿಕ್ ಸರಕು ಲಿಫ್ಟ್ ಬಳಸಿ ಸುಮಾರು 7 ನಿಮಿಷಗಳಲ್ಲಿ ಎಂಟು ಅಮೂಲ್ಯ ಆಭರಣಗಳನ್ನು ಕದ್ದು ಎಸ್ಕೇಪ್ ಆಗಿರುವ ದೃಶ್ಯವು ಭಾರಿ ವೈರಲ್ ಆಗಿದೆ.
ಘಟನೆ ನಡೆದ ಗ್ಯಾಲರಿ ಡಿ’ಅಪೊಲೊನ್‌ನಲ್ಲಿ ಮೋನಾಲೀಸಾ ಸೇರಿದಂತೆ ಹಲವಾರು ಮಾಸ್ಟರ್ ಪೀಸ್ ಕಲಾಕೃತಿಗಳು ಇದ್ದವು. ಕಳ್ಳರು ಕದ್ದ ಆಭರಣಗಳ ಬೆಲೆ $102 ಮಿಲಿಯನ್‌ಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ, ಆದರೆ ಅವುಗಳ ಐತಿಹಾಸಿಕ ಮೌಲ್ಯ ಮತ್ತು ಅಪರೂಪದ ಕಾರಣದಿಂದ ಮಾರಾಟ ಮಾಡಲು ಸಾಧ್ಯವಿಲ್ಲ. ಕದ್ದ ಆಭರಣಗಳಲ್ಲಿ ಶತಮಾನಗಳ ಐತಿಹಾಸಿಕ ಉತ್ಸವ ಕಿರೀಟಗಳು, ಕಂಠಿಹಾರಗಳು, ಕಿವಿಯೋಲೆಗಳು ಮತ್ತು ಬ್ರೂಚ್‌ಗಳು ಸೇರಿವೆ.
ಲೌವ್ರೆ ಮ್ಯೂಸಿಯಂ ದಿನಕ್ಕೆ ಸರಾಸರಿ 30,000 ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿದ್ದು, ವೀನಸ್ ಡಿ ಮಿಲೋ, ವಿಂಗ್ಡ್ ವಿಕ್ಟರಿ ಆಫ್ ಸಮೋತ್ರೇಸ್ ಮತ್ತು ಮೋನಾಲೀಸಾ ಕಲಾಕೃತಿಗಳು ಇಲ್ಲಿ ಪ್ರಮುಖ ಆಕರ್ಷಣೆ. ಈ ಕಳ್ಳತನವು ಕೇವಲ ಆಭರಣಗಳಷ್ಟೇ ಅಲ್ಲ, ಐತಿಹಾಸಿಕ ಕಲಾಪ್ರತಿಷ್ಠೆಗೂ ದೊಡ್ಡ ಹಾನಿ ಆಗಿದೆ.

