Monday, October 27, 2025

Smallest Country | ಪ್ರಪಂಚದ ಅತ್ಯಂತ ಚಿಕ್ಕ ರಾಷ್ಟ್ರ ಯಾವುದು? ಅಲ್ಲಿರೋ ಜನಸಂಖ್ಯೆ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಪಂಚದಲ್ಲಿ ಕೆಲ ದೇಶಗಳು ಲಕ್ಷಾಂತರ ಜನರನ್ನು ಒಳಗೊಂಡಿರುವಂತೆ, ಕೆಲವುಗಳು ದೇಶಗಳು ಸಾವಿರಾರು ಜನರೊಂದಿಗೆ ಮಿತಿಯಲ್ಲಿವೆ. ಆದರೆ, ಕೇವಲ 33 ನಿವಾಸಿಗಳೊಂದಿಗೆ ಅತೀ ಚಿಕ್ಕ ರಾಷ್ಟವೊಂದಿದೆ. ಅದುವೇ ಅಮೆರಿಕದ ನೆವಾಡಾ ಮರುಭೂಮಿಯಲ್ಲಿರುವ ಈ ಸಣ್ಣ ಸ್ವಯಂ ಘೋಷಿತ ರಾಷ್ಟ್ರವು ಮೊಲೋಸಿಯಾ (Molossia). ಅಧಿಕೃತವಾಗಿ ಯಾವುದೇ ರಾಷ್ಟ್ರದಿಂದ ಮಾನ್ಯತೆ ಪಡೆದಿಲ್ಲದಿದ್ದರೂ, ತನ್ನನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದೆ.

1977 ರಲ್ಲಿ ಕೆವಿನ್ ಬಾಗ್ ಮತ್ತು ಅವರ ಸ್ನೇಹಿತರು ತಮ್ಮ ಮನೆಯನ್ನು ಹೊಸ ರಾಷ್ಟ್ರವನ್ನಾಗಿ ಪರಿವರ್ತಿಸುವ ಕನಸನ್ನು ಸಾಕಾರ ಮಾಡಿದ್ದಾರೆ. ಕೆವಿನ್ ಈಗಲೂ ಅಧ್ಯಕ್ಷರಾಗಿ ತಮ್ಮ ಕುಟುಂಬದೊಂದಿಗೆ ಈ ದೇಶವನ್ನು ನಿರ್ವಹಿಸುತ್ತಿದ್ದಾರೆ. ಮೊಲೋಸಿಯಾದಲ್ಲಿ ಸ್ವತಂತ್ರ ಧ್ವಜ, ರಾಷ್ಟ್ರಗೀತೆ, ಕರೆನ್ಸಿ ಮತ್ತು ಕಾನೂನುಗಳೊಂದಿಗೆ, 33 ನಿವಾಸಿಗಳು, ಅವರ ಕುಟುಂಬ ಸದಸ್ಯರು ಇಲ್ಲಿ ವಾಸಿಸುತ್ತಿದ್ದಾರೆ.

ಮೊಲೋಸಿಯಾದಲ್ಲಿ ಸಣ್ಣ ಅಂಗಡಿ, ಗ್ರಂಥಾಲಯ, ಸ್ಮಶಾನ ಮತ್ತು ಕೆಲವು ಅಧಿಕೃತ ಕಟ್ಟಡಗಳಿವೆ. ಪ್ರವಾಸಿಗರು ಇಲ್ಲಿ ಎರಡು ಗಂಟೆಗಳ ಸುತ್ತಾಟ ಮಾಡಬಹುದು. ರಾಷ್ಟ್ರೀಯ ಉತ್ಸವಗಳು, ಕಾನೂನುಗಳು, ಧ್ವಜ ಹಾಗೂ ಪಾಸ್‌ಪೋರ್ಟ್‌ನಲ್ಲಿ ನಿಜವಾದ ದೇಶದಂತೆ ಮುದ್ರೆ ನೀಡುವ ಪದ್ಧತಿ ಮೊಲೋಸಿಯಾಗೆ ವಿಶೇಷತೆಯನ್ನು ನೀಡುತ್ತದೆ.

ಕೇವಿನ್ ಬಾಗ್ ಅವರ ಉತ್ಸಾಹ, 40 ವರ್ಷಕ್ಕೂ ಹೆಚ್ಚು ಕಾಲ ತಮ್ಮ ರಾಷ್ಟ್ರವನ್ನು ಜೀವಂತವಾಗಿರಿಸುವಂತೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ #WorldsSmallestCountry ಎಂಬ ಹ್ಯಾಶ್‌ಟ್ಯಾಗ್ ಮೂಲಕ ಮೊಲೋಸಿಯಾ ಈಗ ಜನಪ್ರಿಯತೆಯನ್ನು ಪಡೆಯುತ್ತಿದೆ.

error: Content is protected !!