Sunday, October 26, 2025

ಮನೆಯವರೇ ಹೀಗೆ ಮಾಡಿದ್ರೆ ಹೇಗೆ?: ತಲೆ ಕೂದಲು ಕತ್ತರಿಸಿ, ಖಾರದ ಪುಡಿ ಹಚ್ಚಿ ಮಹಿಳೆಯ ಮೇಲೆ ದೌರ್ಜನ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳೆಯೊಬ್ಬರ ತಲೆಕೂದಲು ಕತ್ತರಿಸಿ, ಖಾರದ ಪುಡಿ ಹಚ್ಚುವ ಮೂಲಕ ಅವಮಾನಗೊಳಿಸಿದ ಘಟನೆ ಯಾದಗಿರಿ ಜಿಲ್ಲೆ, ಶಹಾಪುರ ತಾಲ್ಲೂಕಿನ ಚಾಮನಾಳ ತಾಂಡಾದಲ್ಲಿ ನಡೆದಿದೆ.

ಸಂತ್ರಸ್ತೆ ಗಂಗಾಬಾಯಿ ಶಂಕರ ಚಿನ್ನಾರಾಠೋಡ (35) ಎಂದು ತಿಳಿದು ಬಂದಿದೆ.

ಪ್ರಾರಂಭಿಕ ತನಿಖೆಯಲ್ಲಿ ಕಸ್ತೂರಿಬಾಯಿ ಡಾಕಪ್ಪ ಮತ್ತು ಡಾಕಪ್ಪ ಚಿನ್ನಾರಾಠೋಡ ಅವರನ್ನು ಬಂಧಿಸಲಾಗಿದೆ. ಇನ್ನುಳಿದ 9 ಮಂದಿ ಆರೋಪಿಗಳು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮುಂಬೈ, ಪುಣೆ ಪ್ರದೇಶಗಳಲ್ಲಿ ತಲೆ ಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂಸಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಭಾವಿ ಪೊಲೀಸ್‌ ಠಾಣೆಯಲ್ಲಿ ಒಟ್ಟು 11 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪೋಲೀಸ್ ವರದಿಗಳ ಪ್ರಕಾರ, ಸಂತ್ರಸ್ತೆ ಆರೋಗ್ಯ ಸಮಸ್ಯೆಯಿಂದ ಕಲಬುರಗಿ ನಿವಾಸಿಯಾಗಿರುವ ಚಿಕ್ಕಮ್ಮನ ಮನೆಗೆ ಬರುವಾಗ, ತನ್ನ ಅಳಿಯ ರಾಮು ರಾಠೋಡನ ಜೊತೆ ಹೋಗುತ್ತಿದ್ದಳು. ಆರೋಪಿಗಳು ಅಳಿಯನ ಜೊತೆಗೆ ಸಂಬಂಧ ಇಟ್ಟುಕೊಂಡು ಓಡಿ ಹೋಗಿ ಮರ್ಯಾದೆ ತೆಗೆದಿದ್ದೀಯಾ ಅಂತ ನಿಂದಿಸಿ ಮನಸೋಇಚ್ಛೆ ಥಳಿಸಿದ್ದಾರೆ. ಗಂಗಾಬಾಯಿಯನ್ನು ನಂತರ ತಲೆಗೆ ಸುಣ್ಣ ಹಚ್ಚಿ, ಮೈಮೇಲೆ ಕಾರದಪುಡಿ ಹಾಕಿ ದುಷ್ಕೃತ್ಯ ಎಸಗಿದ್ದಾರೆ. ಜೊತೆಗೆ ಜೀವ ಬೆದರಿಕೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಕೆಂಭಾವಿ ಪೊಲೀಸರು ಇನ್ನುಳಿದ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದು, ಪ್ರಕರಣದ ಸಂಪೂರ್ಣ ತನಿಖೆ ನಡೆಯುತ್ತಿದೆ.

error: Content is protected !!