Sunday, October 26, 2025

CINE | ಸಿನಿಪ್ರಿಯರೇ ಗಮನಿಸಿ.. ಈ ವಾರ ಒಟಿಟಿಗೆ ಸಿಕ್ಕಾಪಟ್ಟೆ ಸಿನಿಮಾ ಬರ್ತಿದೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಥಿಯೇಟರ್‌ಗೆ ಹೋಗಿ ನೋಡೋಕಾಗಿಲ್ಲ ಎನ್ನುವ ಸಿನಿಮಾಗಳು ಇದೀಗ ಒಟಿಟಿಗೆ ಲಗ್ಗೆ ಇಟ್ಟಿವೆ. ಈ ವಾರ ಸಿನಿಪ್ರಿಯರಿಗೆ ಸಿಹಿ ವಾರವಾಗಿದ್ದು, ಯಾವೆಲ್ಲಾ ಸಿನಿಮಾಗಳು ರಿಲೀಸ್‌ ಆಗಿವೆ ನೋಡಿ..

ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ ಈ ವಾರ ಒಟಿಟಿಗೆ ಕಾಲಿಟ್ಟಿದೆ. ಕೆಲ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಪವನ್ ಕಲ್ಯಾಣ್ ಮಾಸ್ ಅವತಾರ ಪ್ರೇಕ್ಷಕರಿಗೆ ಇಷ್ಟವಾಗಿತ್ತು, ಈ ವಾರ ಈ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ.

ಜಾನ್ಹವಿ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ ಒಟ್ಟಿಗೆ ನಟಿಸಿದ್ದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಪರಮ ಸುಂದರಿ’. ಹಿಂದಿ ಯುವಕನೊಬ್ಬ ಮಲಯಾಳಿ ಯುವತಿಯೊಟ್ಟಿಗೆ ಪ್ರೀತಿಯಲ್ಲಿ ಬೀಳುವ ಕತೆಯನ್ನು ‘ಪರಮ ಸುಂದರಿ’ ಒಳಗೊಂಡಿತ್ತು. ಸಿನಿಮಾ ದೊಡ್ಡ ಕಲೆಕ್ಷನ್ ಮಾಡಲಿಲ್ಲ. ಇದೀಗ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಪಿಚ್ ಟು ರಿಚ್ ಒಂದು ರಿಯಾಲಿಟಿ ಶೋ. ಇದೊಂದು ಫ್ಯಾಷನ್ ರಿಯಾಲಿಟಿ ಶೋ ಆಗಿದ್ದು ಫ್ಯಾಷನ್ ಬ್ರ್ಯಾಂಡ್​​ಗಳು 40 ಕೋಟಿ ರೂಪಾಯಿ ಹೂಡಿಕೆ ಪಡೆಯಲು ಕರಣ್ ಜೋಹರ್, ಮನೀಶ್ ಮಲ್ಹೋತ್ರಾ ಮತ್ತು ಅಕ್ಷಯ್ ಕುಮಾರ್ ಎದುರು ಬಿಸಿನೆಸ್ ಐಡಿಯಾ ಪ್ರೆಸೆಂಟ್ ಮಾಡುತ್ತಾರೆ. ಮೂವರು ಸೆಲೆಬ್ರಿಟಿಗಳು ಅಳೆದು ತೂಗಿ ಹೂಡಿಕೆ ಮಾಡುತ್ತಾರೆ. ರಿಯಾಲಿಟಿ ಶೋ ಜಿಯೋ ಹಾಟ್​​ಸ್ಟಾರ್​​ನಲ್ಲಿ ಬಿಡುಗಡೆ ಆಗಿದೆ.

ಮಹಾಭಾರತದ ಕತೆಯನ್ನು ಒಳಗೊಂಡಿರುವ ಅನಿಮೇಷನ್ ಸಿನಿಮಾ ‘ಮಹಾಭಾರತ್: ಏಕ್ ಧರ್ಮ ಯುದ್ಧ’ ಜಿಯೋ ಹಾಟ್​​ಸ್ಟಾರ್​​ನಲ್ಲಿ ಇದೇ ವಾರ ಬಿಡುಗಡೆ ಆಗಿದೆ. ವಿಶೇಷವೆಂದರೆ ಇದು ಸಂಪೂರ್ಣವಾಗಿ ಎಐ ಬಳಸಿ ನಿರ್ಮಿಸಲಾಗಿರುವ ಸಿನಿಮಾ ಆಗಿದೆ.

error: Content is protected !!