Wednesday, October 29, 2025

Rice series 9 | ಮಕ್ಕಳು ಸಖತ್ ಇಷ್ಟ ಪಡೋ ಬೀಟ್ರೂಟ್ ರೈಸ್! ನೀವೂ ಒಮ್ಮೆ ಟ್ರೈ ಮಾಡಿ

ಬೀಟ್ರೂಟ್‌ ಎಂದರೆ ಬಣ್ಣದ ಸೊಬಗು ಮಾತ್ರವಲ್ಲ, ಆರೋಗ್ಯದ ಖಜಾನೆ ಕೂಡ ಹೌದು. ಕಬ್ಬಿಣ, ವಿಟಮಿನ್‌ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾದ ಬೀಟ್ರೂಟ್‌ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ರಕ್ತಹೀನತೆ ತಡೆಯಲು ಸಹಕಾರಿ. ಇದರ ಸಿಹಿ ರುಚಿ ಮತ್ತು ಸುಂದರ ಬಣ್ಣ ರೈಸ್‌ಗೆ ವಿಶಿಷ್ಟ ಸ್ವಾದ ನೀಡುತ್ತದೆ. ಕೇವಲ ಕೆಲವು ನಿಮಿಷಗಳಲ್ಲಿ ಮಾಡಬಹುದಾದ ಈ ಬೀಟ್ರೂಟ್ ರೈಸ್‌ ಮಕ್ಕಳು ಮತ್ತು ದೊಡ್ಡವರು ಎಲ್ಲರಿಗೂ ಇಷ್ಟವಾಗುವಂಥದು.

ಬೇಕಾಗುವ ಸಾಮಗ್ರಿಗಳು:

ಅಕ್ಕಿ – 1 ಕಪ್‌
ಬೀಟ್ರೂಟ್‌ – 1 ಮಧ್ಯಮ ಗಾತ್ರ
ಈರುಳ್ಳಿ – 1
ಹಸಿಮೆಣಸು – 2
ಶುಂಠಿ ಬೆಳ್ಳುಳ್ಳಿ ಪೇಸ್ಟ್‌ – 1 ಟೀ ಸ್ಪೂನ್‌
ಕಾಳುಮೆಣಸು – ಸ್ವಲ್ಪ
ಜೀರಿಗೆ – ½ ಟೀ ಸ್ಪೂನ್‌
ಗರಂ ಮಸಾಲಾ – ½ ಟೀ ಸ್ಪೂನ್‌
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ ಅಥವಾ ತುಪ್ಪ – 2 ಟೀ ಸ್ಪೂನ್‌
ಕೊತ್ತಂಬರಿ ಸೊಪ್ಪು – ಅಲಂಕರಿಸಲು

ತಯಾರಿಸುವ ವಿಧಾನ:

ಮೊದಲು ಅಕ್ಕಿಯನ್ನು ತೊಳೆದು ಬೇಯಿಸಿಟ್ಟುಕೊಳ್ಳಿ.

ಒಂದು ಪ್ಯಾನ್ನಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ, ಅದಕ್ಕೆ ಜೀರಿಗೆ, ಈರುಳ್ಳಿ ಮತ್ತು ಹಸಿಮೆಣಸನ್ನು ಹಾಕಿ, ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಸ್ವಲ್ಪ ವಾಸನೆ ಬರುವವರೆಗೆ ಕರಿಯಿರಿ. ಈಗ ತುರಿದ ಬೀಟ್ರೂಟ್‌ ಸೇರಿಸಿ ಮಧ್ಯಮ ಉರಿಯಲ್ಲಿ 5–6 ನಿಮಿಷ ಬೇಯಿಸಿ. ನಂತರ ಗರಂ ಮಸಾಲಾ, ಉಪ್ಪು, ಕಾಳುಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿ. ಕೊನೆಯಲ್ಲಿ ಅನ್ನ ಸೇರಿಸಿ ನಾಜೂಕಾಗಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿ ಬಿಸಿ ಬೀಟ್ರೂಟ್ ರೈಸ್ ಸರ್ವ್ ಮಾಡಿ.

error: Content is protected !!