ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ನಗರದ ವ್ಯಾಪ್ತಿಯಲ್ಲಿ ಫ್ಯಾಷನ್ ಡಿಸೈನರ್ ಒಬ್ಬರ ಮೇಲೆ ಹಲ್ಲೆ ಮತ್ತು ಕೊಲೆ ಬೆದರಿಕೆ ನೀಡಲಾಗಿದೆ ಎಂಬ ಆರೋಪದ ಮೇಲೆ EVP ಫಿಲ್ಮ್ ಸಿಟಿ ಮಾಲೀಕನ ಮೇಲೆ ಎಫ್‌ಐಆರ್ ದಾಖಾಲಾಗಿದೆ.
ಆರೋಪಿಯನ್ನು ಸಂತೋಷ್ ರೆಡ್ಡಿ ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ:
ಸಂತೋಷ್ ರೆಡ್ಡಿ ತನ್ನ ಕಸೀನ್ ಮದ್ವೆಗೆ ಬಟ್ಟೆ ಬೇಕು ಎಂದು ಫ್ಯಾಷನ್ ಡಿಸೈನರ್‌ನ್ನು ಸಂಪರ್ಕಿಸಿದ್ದ. ಮಗಳು ಭಾವನ್ಯ ರೆಡ್ಡಿಯಿಂದ ಫ್ಯಾಷನ್ ಡಿಸೈನರ್ ಸಂಪರ್ಕ ಮಾಡಿದ್ದ. ಪರಿಚಯ ಸ್ನೇಹಕ್ಕೆ ತಿರುಗಿ, ಫ್ಯಾಮಿಲಿ ಫ್ರೆಂಡ್‍ನಂತೆ ಜೊತೆಗಿದ್ದು ಬ್ಯುಸಿನೆಸ್‍ಗೆ ಹೂಡಿಕೆ ಮಾಡುವುದಾಗಿ ಹೇಳಿದ್ದ. ಅಲ್ಲದೇ ತನ್ನ ಮಗಳು ಭಾವನ್ಯ ರೆಡ್ಡಿಗೆ ಗಂಡು ಇದ್ದರೆ ನೋಡಿ ಎಂದು ಸಂತ್ರಸ್ತೆಗೆ ಇನ್ನಷ್ಟು ಹತ್ತಿರವಾಗಿದ್ದ.
ಒಂದು ದಿನ ಮಹಿಳೆ ಇದ್ದ ಬೆಂಗಳೂರಿನ ನಿವಾಸಕ್ಕೆ ಬಂದು ನನಗೆ ನಿಮ್ಮ ಸಹಾಯಬೇಕು ಎಂದು ಭಾವನಾತ್ಮಕವಾಗಿ ಮಾತಾಡಿದ್ದ. ಈ ವೇಳೆ ಫ್ಯಾಷನ್ ಡಿಸೈನರ್ ಸಮಾಧಾನ ಮಾಡಿದ್ದರಂತೆ. ಆಗ ಏಕಾಏಕಿ ನಿನ್ನನ್ನ ಪ್ರೀತಿ ಮಾಡ್ತಿನಿ, ನೀನು ಕೂಡ ಪ್ರೀತಿಸ್ಲೇಬೇಕು ಎಂದು ಗೋಗರೆದಿದ್ದನಂತೆ. ಇದನ್ನ ನಿರಾಕರಿಸಿದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಜೊತೆಗೆ ನೀನು ಪ್ರೀತಿಸದಿದ್ದರೆ ನಿನ್ನಿಬ್ಬರು ಮಕ್ಕಳನ್ನ ಕೊಂದು ನಿನ್ನನ್ನೂ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ಥೆ ದೂರಿನಲ್ಲಿ ತಿಳಿಸಿದ್ದಾಳೆ.

