Monday, October 27, 2025

ಭಾರತೀಯ ರೈಲಿನಲ್ಲಿ ಒಂದು ರೌಂಡ್ಸ್….ವಿದೇಶಿ ಪ್ರಜೆಯ ಪ್ರಯಾಣದ ಅನುಭವ ಹೇಗಿತ್ತು ಗೊತ್ತಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿನ ಇತ್ತೀಚಿನ ಹೊಸ ಬದಲಾವಣೆ ವಿದೇಶಿಗರಿಗೆ ಬಹು ಬೇಗನೆ ಇಷ್ಟವಾಗುತ್ತಿದೆ. ಇಲ್ಲಿನ ಆಹಾರದಿಂದ ಹಿಡಿದು ಪ್ರವಾಸಿ ತಾಣಗಳನ್ನು ಇಷ್ಟ ಪಡ್ತಾರೆ. ಇಲ್ಲಿನ ಆಚಾರ, ವಿಚಾರ ಸೇರಿದಂತೆ ಹಲವು ವಿಚಾರವನ್ನು ಕಲಿಯುತ್ತಾರೆ.

ಸಾಮಾನ್ಯರಂತೆ ಬಸ್ಸು, ರೈಲು, ಆಟೋಗಳಲ್ಲಿ ಓಡಾಡುವ ಮೂಲಕ ಹೊಚ್ಚ ಹೊಸ ಅನುಭವವನ್ನು ಪಡೆಯುತ್ತಾರೆ.

ಇದೀಗ ಸ್ಕಾಟಿಷ್ ಕಂಟೆಂಟ್ ಕ್ರಿಯೇಟರ್ ಭಾರತೀಯ ರೈಲಿನಲ್ಲಿ ಪ್ರಯಾಣಿಸಿದ್ದು ತಮಗಾದ ಆನಂದದಾಯಕ ಅನುಭವದ ಬಗ್ಗೆ ಹೇಳಿದ್ದಾರೆ. ಭಾರತೀಯ ರೈಲ್ವೆ ಸೇವೆಯನ್ನು ಶ್ಲಾಘಿಸಿದ್ದಾರೆ.

ವಿವಿಧ ದೇಶಗಳಲ್ಲಿನ ರೈಲ್ವೆ ಸೇವೆಗೂ ಇಲ್ಲಿಗೂ ಏನೆಲ್ಲಾ ವ್ಯತ್ಯಾಸವಿದೆ ಎಂದು ವಿವರಿಸಿದ್ದು, ಈ ವಿಡಿಯೋ ಇಂಟರ್ನೆಟ್‌ನಲ್ಲಿ ಗಮನ ಸೆಳೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರೂ ಭಾರತೀಯ ರೈಲ್ವೆಯ ದಕ್ಷ ಸೇವೆಯನ್ನು ಹಾಡಿ ಹೊಗಳಿದ್ದಾರೆ.

ಈ ವಿಡಿಯೋದಲ್ಲಿ ಟಿಕೆಟ್ ಕಲೆಕ್ಟರ್ ಬಂದು ಪ್ರಯಾಣಿಕರ ಟಿಕೆಟ್ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ವಿದೇಶಿಗನು ಟಿಕೆಟ್ ಪರಿಶೀಲನಾ ವ್ಯವಸ್ಥೆಯ ದಕ್ಷತೆ ಮತ್ತು ರೈಲಿನಲ್ಲಿರುವ ವಿಶಾಲವಾದ ಆಸನ ವ್ಯವಸ್ಥೆಗಳನ್ನು ಹೊಗಳಿದ್ದಾರೆ. ನಿಲ್ದಾಣಗಳಲ್ಲಿ ಯಾವುದೇ ಅಡೆತಡೆಗಳಿಲ್ಲ. ರೈಲು ಚಲಿಸುತ್ತಿದ್ದಂತೆ ಟಿಕೆಟ್ ಕಲೆಕ್ಟರ್ ಬಂದು ನನ್ನ ಟಿಕೆಟ್ ತೆಗೆದುಕೊಂಡು, ನನ್ನ ಹೆಸರು ಹೊಂದಿಕೆಯಾಗುತ್ತದೆಯೇ ಎಂದು ಪರಿಶೀಲಿಸಿದರು.

https://www.instagram.com/reel/DKZqeU4PrZy/?utm_source=ig_embed&ig_rid=4202e60c-e38f-4bab-bbdd-98b7da2dcdf4

ಜಪಾನ್, ತೈವಾನ್, ಕೊರಿಯಾದಲ್ಲಿ ಇತರ ದೇಶಗಳಲ್ಲಿ ನಾನು ನೋಡಿದ ರೈಲುಗಳಿಗೆ ಹೋಲಿಸಿದ್ರೆ ಇಲ್ಲಿ ಹೆಚ್ಚು ಸ್ಥಳವಕಾಶವಿದೆ. ಈ ರೈಲು ಇತರ ಎಲ್ಲಾ ದೇಶದ ರೈಲ್ವೆ ಸೇವೆಗಳನ್ನು ಮೀರಿಸುತ್ತದೆ, ಸ್ಥಳ ಹಾಗೂ ಗೌಪ್ಯತೆಯ ದೃಷ್ಟಿಯಿಂದ ರೈಲು ಸೇವೆಯೂ ಸಾಕಷ್ಟು ಉತ್ತಮವಾಗಿದೆ. ಕೆಲವೊಮ್ಮೆ ಯುಕೆಯಲ್ಲಿ, ನೀವು ಸ್ಕಾಟ್ಲೆಂಡ್‌ನಿಂದ ಲಂಡನ್‌ಗೆ ಹೋಗಲು €80 ಪಾವತಿಸುತ್ತೀರಿ. ನಿಮ್ಮ ಪಕ್ಕದಲ್ಲಿ ಬೇರೊಬ್ಬ ಪ್ರಯಾಣಿಕರು ಇದ್ದೆ ಇರುತ್ತಾರೆ ಎಂದಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ಇಡೀ ರೈಲಿನಲ್ಲಿ ಅತ್ಯುತ್ತಮ ಸೀಟೆಂದರೆ ಕೆಳಗಿನ ಬದಿಯ ಸೀಟು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನಿದ್ದೆ ಮಾಡಿ, ಚಹಾ ಕುಡಿಯಿರಿ. ಆರಾಮದಾಯಕ ಪ್ರಯಾಣ ಮಾಡಿ ಎಂದು ಹೇಳಿದ್ದಾರೆ.

error: Content is protected !!